ವಿಜಯ ನಗರ ಕ್ಷೇತ್ರದ ಅನರ್ಹ ಶಾಸಕ ಆನಂದ್ ಸಿಂಗ್ ಅವರ ವಿರುದ್ಧ ಬಿಜೆಪಿ ಶಾಸಕರು ತಿರುಗಿ ಬಿದ್ದ ಕಾರಣ ಈಗ ಆನಂದ್ ಸಿಂಗ್ ಅವರು ಏಕಾಂಗಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯವಾದ ಕಾರಣವೇ ಅನರ್ಹ ಶಾಸಕರ ರಾಜೀನಾಮೆ, ಆದರೆ ರಾಜಕೀಯ ಬೆಳವಣಿಗೆಗಳಲ್ಲಿ ಈಗ ಅನರ್ಹ ಶಾಸಕನ ವಿರುದ್ಧ ಬಿಜೆಪಿ ಶಾಸಕರೇ ತಿರುಗಿ ಬೀಳುವಂತಾಗಿದೆ. ಆನಂದ್ ಸಿಂಗ್ ಅವರು ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಹೊರಟಿದ್ದು, ಬಳ್ಳಾರಿಯ ಬಿಜೆಪಿ ಶಾಸಕರೇ ಆನಂದ್ ಸಿಂಗ್ ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದು, ಅಖಂಡ ಬಳ್ಳಾರಿಯನ್ನು ಒಡೆಯಲು ಬಿಡುವುದಿಲ್ಲ ಎಂದಿದ್ದಾರೆ‌ ಬಿಜೆಪಿ ಶಾಸಕರು.

ಆನಂದ್ ಸಿಂಗ್ ಅವರು ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ರಾಜೀನಾಮೆ ನೀಡಿದ್ದು, ವಿಜಯ ನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಅವರ ಬೇಡಿಕೆಯನ್ನು ಸಿಎಂ ಯಡಿಯೂರಪ್ಪನವರು ಮನ್ನಣೆ ನೀಡಿ, ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರೇ ಆನಂದ್ ಸಿಂಗ್ ಅವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಯಾವ ಪುರುಷಾರ್ಥ ಸಾಧನೆಗಾಗಿ ಅಖಂಡ ಬಳ್ಳಾರಿಯನ್ನು ವಿಭಜನೆ ಮಾಡಬೇಕೆಂದು ಅಲ್ಲಿನ ಬಿಜೆಪಿ ಶಾಸಕರು ಪ್ರಶ್ನೆ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿದ್ದು,
ಯಾರನ್ನೂ ಕೂಡಾ ಸಂಪರ್ಕ ಮಾಡದೆ, ಚರ್ಚೆ ಮಾಡದೆ ಇಂತಹ ನಿರ್ಧಾರವನ್ನು ಕೈಗೊಂಡಿದ್ದನ್ನು ಬಿಜೆಪಿ ಶಾಸಕರು ವಿರೋಧಿಸಿದ್ದಾರೆ‌. ವಿವಿಧ ಸಂಘಟನೆಗಳು ಅಕ್ಟೋಬರ್ ಒಂದರಂದು ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಬಂದ್ ಮಾಡಲು ಕರೆಯನ್ನು ನೀಡಿದ್ದಾರೆ. ಇಂತಹ ಬೆಳವಣಿಗೆಗಳಿಂದ ಆನಂದ್ ಸಿಂಗ್ ಅವರು ಈಗ ಅಕ್ಷರಶಃ ಒಂಟಿಯಾಗಿದ್ದು, ಒಬ್ಬರೇ ಹೋರಾಟವನ್ನು ಮಾಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here