ದ್ವಾರಕೀಶ್ ನಿರ್ಮಾಣದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅಭಿನಯದಲ್ಲಿ ಕಳೆದ ಶುಕ್ರವಾರ ತೆರೆಗೆ ಬಂದಿರುವ ಚಿತ್ರ ಆಯುಷ್ಮಾನ್ ಭವ. ಕನ್ನಡ ಚಿತ್ರರಂಗಕ್ಕೆ ಗುರಿ , ಆಪ್ತಮಿತ್ರ, ದೃಶ್ಯ , ಶಿವಲಿಂಗ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪಿ. ವಾಸು ಅವರು ಆಯುಷ್ಮಾನ್ ಭವ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆಯುಷ್ಮಾನ್ ಭವ ಚಿತ್ರದಲ್ಲಿ ಹಲವಾರು ಪ್ರಮುಖ ಅಂಶಗಳು ಇವೆ. ಅವುಗಳಲ್ಲಿ ಕಲಾವಿದರ ಮನೋಜ್ಞ ಅಭಿನಯ ಸಹ ಒಂದು. ಶಿವರಾಜ್ ಕುಮಾರ್, ಅನಂತ್ ನಾಗ್ ಮತ್ತು ರಚಿತಾ ರಾಮ್ ಅವರು ಆಯುಷ್ಮಾನ್ ಭವ ಚಿತ್ರವನ್ನು ತಮ್ಮ ಅದ್ಭುತ ಅಭಿನಯದ ಮೂಲಕ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ.

ಅದರಲ್ಲೂ ಆಯುಷ್ಮಾನ್ ಭವ ಚಿತ್ರದಲ್ಲಿ ಅನಂತ್ ನಾಗ್ ಸಹ ಪ್ರಮುಖ ಪತ್ರದಲ್ಲಿ ಅಭಿನಯಿಸಿದ್ದಾರೆ. ವಾಸುದೇವ ಎಂಬ ಪಾತ್ರದಲ್ಲಿ ಅನಂತ್ ನಾಗ್ ಅವರು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ಆಯುಷ್ಮಾನ್ ಭವ ಚಿತ್ರದಲ್ಲಿ ಅನಂತ್ ನಾಗ್ ಅವರದ್ದು ಎರಡು ಶೇಡ್ ಇರುವ ಪಾತ್ರ ಎನ್ನಬಹುದು. ತುಂಬಿದ ಸಂಸಾರದ ಮುಖ್ಯಸ್ಥನಾಗಿ ಜೊತೆಗೆ ಹಿರಿಯ ವಯಸ್ಸಿನ ಸ್ನೇಹಿತರ ಜೊತೆ ಇರುವ ಲವಲವಿಕೆಯ ಪಾತ್ರದಲ್ಲಿ ಅನಂತ್ ನಾಗ್ ಅವರಿಗೆ ಅವರೇ ಸರಿಸಾಟಿ. ತನ್ನ ಮೊಮ್ಮಗಳಿಗಾಗಿ

ಪರಿತಪಿಸುವ ಭಾವನಾತ್ಮಕ ಪಾತ್ರದಲ್ಲಿ ನೋಡುಗರಿಗೆ ಬಹಳ ಹತ್ತಿರವಾಗಿಬಿಡುತ್ತಾರೆ ಅನಂತ್ ನಾಗ್. ಒಟ್ಟಿನಲ್ಲಿ ಆಯುಷ್ಮಾನ್ ಭವ ಚಿತ್ರದ ಒಂದೊಂದು ಪಾತ್ರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪಿ. ವಾಸು. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ವಿಫಲವಾಗುತ್ತಿವೆ. ಆದರೆ ದ್ವಾರಕೀಶ್ ನಿರ್ಮಾಣದ ಶಿವರಾಜ್ ಕುಮಾರ್, ರಚಿತ ರಾಮ್, ಅನಂತ್ ನಾಗ್ ಅಭಿನಯದ ಆಯುಷ್ಮಾನ್ ಭವ ಚಿತ್ರ ಕುಟುಂಬ ಸಮೇತ ನೋಡಲು ಹೇಳಿ ಮಾಡಿಸಿದಂತಿದೆ..

ಇದನ್ನೂ ಓದಿ…. 

ಈ ಸಿನಿಮಾದ ಮೂಲಕ ಶಿವಣ್ಣ ನನಗೆ ತುಂಬಾ ಹತ್ತಿರವಾಗಿದ್ದಾರೆ . ಅನಂತ್ ನಾಗ್ ಹೀಗೇಳಿದ್ದು ಯಾಕೆ ?

ಈ ಸಿನಿಮಾದ ಮೂಲಕ ಶಿವಣ್ಣ ನನಗೆ ತುಂಬಾ ಹತ್ತಿರವಾಗಿದ್ದಾರೆ . ಅನಂತ್ ನಾಗ್ ಹೀಗೇಳಿದ್ದು ಯಾಕೆ ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here