ಸದಾ ಉದ್ರೇಕಕಾರಿ ಮತ್ತು ಆವೇಶಭರಿತ ಮಾತುಗಳಿಂದ ಕರಾವಳಿಯಲ್ಲಿ‌ ರೊಚ್ಚಿಗೆಬ್ಬಿಸಿದ , ಹಿಂದೂಗಳ ಹಾಟ್ ಫೇವರಿಟ್ ಎನಿಸಿಕೊಂಡಿರುವ ಕರಾವಳಿ ಕಲಿ ಸಚಿವ ಬಿ.ಜೆ.ಪಿ‌ ಸಂಸದ ಅನಂತಕುಮಾರ್ ಹೆಗ್ಡೆ ಮತ್ತೆ ತಮ್ಮ ಖಡಕ್ ಮಾತುಗಳೊಂದ ಸುದ್ದಿಯಲ್ಲಿದ್ದಾರೆ.!
ಈ ಭಾರಿ ನೇರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿ.ಎಂ. ಸಿದ್ದರಾಮಯ್ಯ ಅವರಿಗೆ ಸವಾಲಾಕಿರುವ ಅನಂತಕುಮಾರ್ ಹೆಗ್ಡೆ  ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಉಳಿಸಿಕೊಳ್ಳುವ ಮನಸ್ಸಿದ್ದರೆ ತೊಡೆ ತಟ್ಟಿ ಉತ್ತರ ಕನ್ನಡಕ್ಕೆ ಬನ್ನಿ ಇಲ್ಲಾ ನಾನೇ ಚಾಮುಂಡೇಶ್ವರಿಗೆ ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಸದಾ ತೊಡೆ ತಟ್ಟಿ ಚಾಲೆಂಜ್ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಾಖತ್ತನ್ನೇ ಪ್ರೆಶ್ನೆ ಮಾಡಿರುವ ಅನಂತಕುಮಾರ್ ಹೆಗಡೆ ಸವಾಲನ್ನು ಸಿದ್ದರಾಮಯ್ಯ ಸ್ವೀಕರಿಸುತ್ತಾರಾ ಅಥವಾ ಇಲ್ಲವ ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸಂಸದ , ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಇತ್ತೀಚಿನ ಹೇಳಿಕೆಗಳು ಕೆಲವು ವಿವಾದಕ್ಕೆ ಎಡೆ ಮಾಡಿಕೊಡುತ್ತಿರುವುದಂತೂ ಸುಳ್ಳಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here