ಆಂಧ್ರ ಚುನಾವಣಾ ಕಣದಲ್ಲಿ ಚಂದ್ರಬಾಬು ನಾಯ್ಡು ಅವರ ಪಕ್ಷ ಕೇವಲ 22 ಕಡೆ ಮಾತ್ರ ಮುನ್ನಡೆ ಸಾಧಿಸಿದೆ. ಅವರಿಗೆ ನಿಜಕ್ಕೂ ಇದು ಭಾರೀ ಹಿನ್ನಡೆಯನ್ನು ಸಾಧಿಸಿದೆ.

ಇನ್ನು ತೀವ್ರವಾದ ಜನಾದರಣೆ ಹೊಂದಿ ದೊಡ್ಡ ಸದ್ದು ಮಾಡಿದ್ದ ಪವನ್ ಕಲ್ಯಾಣ್ ಅವರ ಪಕ್ಷ ಇನ್ನೂ ಕಣ್ಣು ಕೂಡಾ ದೊರೆತಿಲ್ಲ ಎಂಬ ಮಾಹಿತಿ ಆಶ್ಚರ್ಯ ಹುಟ್ಟಿಸಿದೆ.

ಭೂಪಾಲ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ, ಆರೋಪಗಳನ್ನು ಮೈಮೇಲೆ ಎಳೆದು ಕೊಂಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಅವರು 23,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಬೆಗುಸರಾಯ್ ನಲ್ಲಿ ಕನ್ಹಯ ಕುಮಾರ್ ಗೆ ತೀವ್ರ ಹಿನ್ನಡೆ ಉಂಟಾಗಿದೆ. ಅವರ ವಿರೋಧಿ ಬಿಜೆಪಿಯ ಗಿರಿರಾಜ್ ಸಿಂಗ್ 35,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಪೂರ್ವದೆಹಲಿಯಲ್ಲಿ ಗೌತಮ್ ಗಂಭೀರ್ ಅವರು ಮುನ್ನಡೆ ಸಾಧಿಸಿದ್ದಾರೆ. ರಾಜಕೀಯ ಆಟದಲ್ಲಿ ಕೂಡಾ ಅವರು ಮುನ್ನಡೆ ಸಾಧಿಸಿದ್ದಾರೆ.

ಅಮೇತಿಯಲ್ಲಿ ಹಿನ್ನಡೆ ಸಾಧಿಸಿದ ರಾಹುಲ್ ಗಾಂಧಿ ಅವರು ವಯ್ನಾಡಿನಲ್ಲಿ ಮುನ್ನಡೆಯನ್ನು ಸಾಧಿಸಿದ್ದರು. ಆದರೆ ಈಗ ಅಮೇತಿಯಲ್ಲಿ ಕೂಡಾ ರಾಹುಲ್ ಮುನ್ನಡೆ ಸಾಧಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here