ದೇಶದೆಲ್ಲೆಡೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರಗಳು ಸಾಕಷ್ಟು ಶ್ರಮ ವಹಿಸುತ್ತಿರುವ ಜೊತೆಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೂಡಾ ಕೈಗೊಳ್ಳಲು ಮುಂದಾಗಿದೆ. ಈ ಹಿ‌ನ್ನೆಲೆಯಲ್ಲಿ ಸರ್ಕಾರದ ಜೊತೆಗೆ ಉದ್ದಿಮೆದಾರರು ಕೂಡಾ ಕೈ ಜೋಡಿಸಬೇಕು ಎನ್ನುವ ಘನ ಉದ್ದೇಶದೊಂದಿಗೆ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಮೂಲಕ ಸಂದೇಶವೊಂದನ್ನು ರವಾನೆ ಮಾಡಿ, ಇತರೆ ಉದ್ದಿಮೆದಾರರಿಗೆ ಪ್ರೇರಣೆ ಆಗಿದ್ದರು‌. ಅಲ್ಲದೆ ಕೊರೊನಾ ಪೀಡಿತರ ಚಿಕಿತ್ಸೆಗೆ ತಮ್ಮ ರೆಸಾರ್ಟ್ ಗಳನ್ನು ನೀಡುವುದಾಗಿ ಕೂಡಾ ಅವರು ಘೋಷಣೆಯನ್ನು ಮಾಡಿದ್ದರು.

ಆನಂದ್ ಮಹೀಂದ್ರಾ ಅವರ ಸಂದೇಶಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರತೊಡಗಿದ್ದು, ದೇಶದ ಪ್ರಮುಖ ಉದ್ದಿಮೆದಾರರು ತಾವು ಕೂಡಾ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸುವುದಾಗಿ ಮುಂದೆ ಬರುತ್ತಿದ್ದಾರೆ. ವೆಂಡೇಟಾ ರಿಸೋರ್ಸ್ ನ ಚೇರ್ಮನ್ ಆದಂತಹ ಅನಿಲದ ಅಗರ್ ವಾಲ್ ಅವರು ಟ್ವೀಟ್ ಮೂಲಕ ದೇಶದ ಅಗತ್ಯಕ್ಕಾಗಿ ತಾನು 100 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ. ಇದು ದೇಶಕ್ಕೆ ಹೆಚ್ಚು ಅಗತ್ಯದ ಸಮಯದಲ್ಲಿ ನಾವು ಕೈಗೊಂಡ ಪ್ರತಿಜ್ಞೆಯಾಗಿದೆ ಅನೇಕ ಜನರು ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಮತ್ತು ದೈನಂದಿನ ವೇತನ ಪಡೆಯುವವರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ, ಸಹಾಯ ಮಾಡಲು ನಾವು ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಪೇಟಿಎಂ ನ‌ ಸಂಸ್ಥಾಪಕ ವಿಜಯ್ ಶೇಖರ್ ಅವರು ಕೊರೊನಾ ಔಷಧಿ ಕಂಡು ಹಿಡಿಯುವ ಪ್ರಯತ್ನ ಕ್ಕೆ ತನ್ನ ಕಡೆಯಿಂದ ಐದು ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ. ಉದ್ದಿಮೆದಾರರು ತೋರಿರುವ ಈ ಆಸಕ್ತಿ ಹಾಗೂ ತಮ್ಮ ಕೊಡುಗೆಯನ್ನು ನೀಡಲು ಮುಂದೆ ಬಂದಿರುವ ಅವರ ಈ ನಡೆ ಜನರ ಮೆಚ್ಚುಗೆಯನ್ನ ಪಡೆದುಕೊಂಡಿದೆ. ಇದೊಂದು ಧನಾತ್ಮಕ ನಡೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here