ವಿಶ್ವಾದ್ಯಂತ  ಮಹಾಮಾರಿ ಕೋರೋನ  ವೈರಸ್ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಮತ್ತು ಆಯಾ ರಾಜ್ಯದ ಮುಖ್ಯಮಂತ್ರಿಗಳು ನಿಧಿ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ. ಕೋವಿಡ್ ವಿರುದ್ಧ ಹೋರಾಡಲು ಜನಪ್ರತಿನಿಧಿಗಳು ಸೆಲೆಬ್ರಿಟಿಗಳು ಚಿತ್ರರಂಗದ ವಿವಿಧ ಗಣ್ಯರು ಹಾಗೂ ಉದ್ಯಮಿಗಳು ತಮ್ಮಿಂದಾಗುವ ಸಹಾಯಧನವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಮತ್ತು  ಮುಖ್ಯಮಂತ್ರಿ ಪರಿಹಾರ ನಿಧಿಗೆ ವಿತರಣೆ ಮಾಡುತ್ತಿದ್ದಾರೆ.

ವಿವಿಧ ರಂಗದ ಗಣ್ಯರು ಕೋಟ್ಯಂತರ ರೂಪಾಯಿಗಳ ದೇಣಿಗೆ ನೀಡುವ ಮೂಲಕ ತಮ್ಮ ಔಧಾರ್ಯ  ಮೆರೆದಿದ್ದಾರೆ. ಇದೀಗ ಭಾರತದ ಹೆಮ್ಮೆಯ ವಿಶ್ವವಿಖ್ಯಾತ ಲೆಗ್ ಸ್ಪಿನ್ನರ್ ನಮ್ಮ ಕರ್ನಾಟಕದ ಅನಿಲ್ ಕುಂಬ್ಳೆ ಅವರು ಸಹ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮಿಂದಾಗುವ ಹಣವನ್ನು ಸಹಾಯ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಅನಿಲ್ ಕುಂಬ್ಳೆ ಅವರು ಎಲ್ಲರೂ ತಮ್ಮಿಂದಾಗುವ ಸಹಾಯವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ವಿರುದ್ಧ ಹೋರಾಟಕ್ಕೆ ಬಲ ತುಂಬುವ ಎಂದು ಹೇಳಿದ್ದಾರೆ.

ಆದರೆ ಅನಿಲ್ ಕುಂಬ್ಳೆ ಅವರು ಎಷ್ಟು ಹಣ ನೆರವು ನೀಡಿದ್ದಾರೆ ಎಂಬುದನ್ನು ಮಾತ್ರ ಅವರು ರಿಸೀವ್ ಮಾಡಿಲ್ಲ.  ಹಲವು ಕ್ರಿಕೆಟ್ ಪ್ಲೇಯರ್ ಗಳಾದ ಸಚಿನ್ ತೆಂಡೂಲ್ಕರ್ ರೋಹಿತ್ ಶರ್ಮಾ ಸೌರವ್ ಗಂಗೂಲಿ ಸೇರಿದಂತೆ ಹಲವಾರು ಆಟಗಾರರು ವಿರುದ್ಧ ಹೋರಾಟಕ್ಕೆ ನೀಡಿ ಮಾನವೀಯತೆ ಮೆರೆದಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here