ಟೀಂ ಇಂಡಿಯಾ ಮಾಜಿ ನಾಯಕ, ಭಾರತದ ಖ್ಯಾತ ಲೆಗ್ ಸ್ಪಿನರ್, ದಂತಕತೆ ಅನಿಲ್ ಕುಂಬ್ಳೆ ಅಂದು ಇನಿಂಗ್ಸ್​ನ ಎಲ್ಲ ವಿಕೇಟ್​ ಕಿತ್ತಿದ್ದರು. ಅವರ ಮಹಾನ್​ ಸಾಧನೆಗೆ ಇಂದಿಗೆ 21 ವರ್ಷ.1999ರ ಫೆ.7ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ 26.3 ಓವರ್​ಗಳಲ್ಲಿ ಕೇವಲ 74 ರನ್ ನೀಡಿ ಇನಿಂಗ್ಸ್​ನ ಎಲ್ಲಾ ಹತ್ತು ವಿಕೆಟ್ ಕಬಳಿಸಿದ್ದರು.ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನ ತಂಡ ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದಿತ್ತು. ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಟೀಂ ಇಂಡಿಯಾದ ನೆರವಿಗೆ ನಿಂತಿದ್ದು ಕನ್ನಡದ ಹೆಮ್ಮೆ ಅನಿಲ್ ಕುಂಬ್ಳೆ.

ದೆಹಲಿಯ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಜರುದ್ದೀನ್ ನಾಯಕತ್ವದ ಭಾರತ 252 ರನ್ ಗಳಿಸಿತ್ತು. ಕುಂಬ್ಳೆ ಮತ್ತು ಹರ್ಭಜನ್ ದಾಳಿಗೆ ನಲುಗಿದ್ದ ಪಾಕ್ ಮೊದಲ ಇನ್ನಿಂಗ್ಸ್​ನಲ್ಲಿ 172 ರನ್ ಗೆ ಆಲ್​ಔಟ್ ಆಗಿತ್ತು. ಕುಂಬ್ಳೆ 4 ಮತ್ತು ಹರ್ಭಜನ್ ಸಿಂಗ್ ಮೂರು ವಿಕೆಟ್ ಪಡೆದಿದ್ದರು.ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 339 ರನ್ ಗಳಿಸಿತ್ತು. ಪಂದ್ಯ ಗೆಲ್ಲಲು ಪಾಕ್ ಗೆ ಗುರಿ 420 ರನ್ ನೀಡಲಾಗಿತ್ತು.

ಎರಡು ದಿನ ಬಾಕಿ ಇತ್ತು. ಆದರೆ ಬ್ಯಾಟಿಂಗ್ ಅರಂಭಿಸಿದ ಪಾಕ್​, ಕುಂಬ್ಳೆ ಜಾದುಗೆ ಎದುರಾಳಿ ತಂಡದ ಎಲ್ಲಾ ಆಟಗಾರರು ಪೆವಿಲಿಯನ್​ಗೆ ತೆರಳಿದ್ದರು.ಭಾರತಕ್ಕೆ 212 ರನ್ ಗಳ ಭರ್ಜರಿ ಜಯ ಸಾಧಿಸಿ ಇನಿಂಗ್ಸ್ಅನ್ನು ಸಮಾಭಲ ಮಾಡಿಕೊಂಡಿತು. ಈ ಮೊದಲು ಇಂಗ್ಲೆಂಡಿನ ಜಿಮ್ ಲೇಕರ್ 1956ರಲ್ಲಿ ಆ ಸಾಧನೆ ಮಾಡಿದ್ದವರು. 43 ವರ್ಷಗಳ ನಂತರ ಆ ಸಾಧನೆಯನ್ನು ಕುಂಬ್ಳೆ ಸರಿಗಟ್ಟಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here