ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ, ಕನ್ನಡದ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಜೊತೆ ಜೊತೆಯಲಿಯ ಕಥಾನಾಯಕ ಅನಿರುದ್ ಅವರು ಈ ಹಿಂದೆ ಗಿಡ ನೆಡುವ ಸವಾಲೊಂದನ್ನು ನೀಡಿದ್ದರು. ಅವರ ಸವಾಲನ್ನು ಸ್ವೀಕರಿಸಿದ ಅನೇಕರು ಸಸಿಗಳನ್ನು ನೆಟ್ಟು ಅದರ ಫೋಟೋಗಳನ್ನು ಕೂಡಾ ಅನಿರುದ್ ಅವರಿಗೆ ಕಳುಹಿಸಿದ್ದರಿಂದ ಸಂತಸಗೊಂಡ ಅನಿರುದ್ ಅವರು ಅದರಿಂದ ಖುಷಿಗೊಂಡು ಎಲ್ಲರಿಗೂ ಧನ್ಯವಾದಗಳನ್ನು ಹೇಳುವ ಜೊತೆಗೆ ಈಗ ಮತ್ತೊಂದು ಸವಾಲನ್ನು ನೀಡುತ್ತಿರುವ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅವರು ಮಾಡಿರು ಪೋಸ್ಟ್ ಈ ರೀತಿ ಇದೆ.

ಹೊಸದೊಂದು ಸವಾಲು ನಿಮ್ಮ ಮುಂದೆ..
ಎಲ್ಲಾ ನನ್ನ ಪ್ರೀತಿ ಪಾತ್ರರಿಗೆ ನಿಮ್ಮ ಅನಿರುದ್ಧ್ ನ ನಮಸ್ಕಾರಗಳು.. ಕೆಲ ದಿನಗಳ ಹಿಂದೆ ನೀಡಿದ್ದ ಗಿಡ ನೆಡುವ ಸವಾಲನ್ನು ಸ್ವೀಕರಿಸಿ ಸಾವಿರಾರು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದೀರಿ.. ಎಲ್ಲಾ ಗಿಡಗಳನ್ನು ಚೆನ್ನಾಗಿ ಪೋಷಿಸುತ್ತಿದ್ದೀರಿ ಎಂಬ ನಂಬಿಕೆ ನನಗಿದೆ.. ಇದೀಗ ಮತ್ತೊಂದು ಸವಾಲಿನ ಸಮಯ..
ಇಲ್ಲಿದೆ ನೋಡಿ #AnirudhChallenge3
ಈ ಸವಾಲನ್ನು ಸ್ವೀಕರಿಸುವವರು, 20 ರೂಪಾಯಿಗಳ ಒಂದು ನೋಟ್ ಬುಕ್ ಹಾಗೂ 5 ರೂಪಾಯಿಯ ಒಂದು ಪೆನ್ ಅನ್ನು ನಿಮ್ಮ ಹತ್ತಿರದ ಸರ್ಕಾರಿ ಶಾಲೆಯ ಒಂದು ಮಗುವಿಗೆ ನೀಡಬೇಕು.. ಈ ಸವಾಲಿನಲ್ಲಿ ನಾನೂ ಕೂಡ ಪಾಲ್ಗೊಳ್ಳುವೆ.. ಸೋಮವಾರ (ಡಿಸೆಂಬರ್ 16) ಸರ್ಕಾರಿ ಶಾಲೆಯ ಯೂನಿಫಾರ್ಮ್ ನಲ್ಲಿ ಇರುವ ಮಕ್ಕಳಿಗೆ ಅವರು ಶಾಲೆಗೆ ಹೋಗುವ ಸಮಯದಲ್ಲಿ ಕನಿಷ್ಟ 1 ಮಗು, ನಿಮ್ಮ ಕೈನಲ್ಲಿ ಸಾಧ್ಯವಾದರೆ 4 ಮಕ್ಕಳಿಗೆ ಪುಸ್ತಕ ಹಾಗೂ ಪೆನ್ ಅನ್ನು ನೀಡಬೇಕು.. ನೀವು ನೋಟ್ ಬುಕ್ ನೀಡುವ ಫೋಟೋವನ್ನು ನಾನು ಸೋಮವಾರ ಸಂಜೆ 5 ಗಂಟೆಗೆ ಹಾಕುವ ಪೋಸ್ಟ್ ಗೆ ಕಮೆಂಟ್ ಮಾಡಬೇಕು.. (ಅನುಕೂಲ ಇದ್ದವರು ಮಾತ್ರ ಭಾಗವಹಿಸಿ) ಎಂದಿನಂತೆ ಫೋಟೋ ಕಮೆಂಟ್ ಮಾಡಿದ ಎಲ್ಲರ ಫೋಟೋವನ್ನು ನಾನು ನಿಮ್ಮ ಹೆಸರಿನ ಸಮೇತ ಪೋಸ್ಟ್ ಮಾಡುವೆ.. ಹಾಗೆಯೇ ಇಬ್ಬರಿಗೆ ಸಣ್ಣ ಉಡುಗೊರೆಯನ್ನು ಕಳುಹಿಸಿಕೊಡುವೆ..

ಈ ಸವಾಲಿನಲ್ಲಿ 500 ಜನ ಪಾಲ್ಗೊಂಡರೂ ಕೂಡ 500 ಮಕ್ಕಳಿಗೆ ಕನಿಷ್ಠ ಒಂದು ನೋಟ್ ಬುಕ್ ಸಿಕ್ಕಂತಾಗುತ್ತದೆ.. ಇಲ್ಲಿ ಹಣಕ್ಕಿಂತ ಆತ್ಮತೃಪ್ತಿ ಹೆಚ್ಚು ಸಂತೋಷ ಕೊಡುತ್ತದೆ.. ನನ್ನ ನಿಮ್ಮ ನಡುವೆ ನಂಬಿಕಯೊಂದೇ ಸೇತುವೆ.. ಎಂದು ಹೇಳಿದ್ದಾರೆ. ಅನಿರುದ್ ಅವರು ಜೊತೆ ಜೊತೆಯಲಿ ಮೂಲಕ ನಾಡಿನ ಮನೆ ಮನೆ ಮಾತಾಗಿದ್ದು, ಜನರ ಮನ ಗೆಲ್ಲುವ ಜೊತೆಗೆ, ತನ್ನ ಜನಪ್ರಿಯತೆಯನ್ನು ಈ ರೀತಿಯ ಒಂದು ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಮಾಡಲು ಜನರಿಗೆ ಸ್ಪೂರ್ತಿ ನೀಡುವ ಕಾಯಕಕ್ಕೆ ಬಳಸಿರುವ ಅವರ ಈ ಮಾದರಿ ಕಾರ್ಯಕ್ಕೆ ನಾವೆಲ್ಲರೂ ಮೆಚ್ಚುಗೆ ಸೂಚಿಸಲೇ ಬೇಕಲ್ಲವೇ? ನಿಜಕ್ಕೂ ಅನಿರುದ್ ಅವರು ತಮ್ಮ ಇಂತಹ ಕಾರ್ಯದಿಂದಲೇ ಇತರರಿಗಿಂತ ಭಿನ್ನ ಹಾಗೂ ಜನರ ಆಪ್ತರಾಗುತ್ತಾ ಸಾಗುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here