ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಹುಟ್ಟಿನಿಂದ ತಮಿಳನಾಡಿನವರಾದರೂ, ವೃತ್ತಿಯಿಂದ ಕನ್ನಡಿಗರ ಮನೆ ಮನೆಗಳಲ್ಲಿ ಗೌರವಾದರಗಳನ್ನು ಪಡೆದಂತಹ ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ. ತಮ್ಮ ದಕ್ಷ ಕಾರ್ಯ ನಿರ್ವಹಣೆಯಿಂದಲೇ ಜನರ ಮನಸ್ಸಿನಲ್ಲಿ ಉಳಿದುಕೊಂಡ ಇವರು ಇದ್ದಕ್ಕಿದ್ದಂತೆ ವೃತ್ತಿಗೆ ರಾಜೀನಾಮೆ ನೀಡಿದಾಗ, ಅದೆಷ್ಟೋ ಜನ ಅವರ ನಿರ್ಧಾರವನ್ನು ಒಪ್ಪಲಿಲ್ಲ‌. ಆದರೆ ಅವರಿಗೂ ಒಂದು ಜೀವನ ಇದೆ ಎಂದು ಅರಿತವರು ಅವರ ಮುಂದಿನ ಜೀವನಕ್ಕಾಗಿ ಶುಭ ಹಾರೈಸಿದರು. ಹೀಗೆ ಜನರ ಪ್ರೀತಿ ಗೆದ್ದ ಅಣ್ಣಾಮಲೈ ಅವರು ವೀಕೆಂಡ್ ವಿತ್ ರಮೇಶ್ ಶೋ ನ ಫಿನಾಲೇ ಎಪಿಸೋಡ್ ಗೆ ಬಂದು ಎಲ್ಲರಿಗೂ ಸಂತಸ ಉಂಟು ಮಾಡಿದ್ದಾರೆ.

ಸಾಧಕರ ಕುರ್ಚಿಯಲ್ಲಿ ಕೂರಲು ತಾನಿನ್ನು ಏನೂ ಸಾಧನೆ ಮಾಡೇ ಇಲ್ಲವೆಂದು, ಆ ಕುರ್ಚಿಯಲ್ಲಿ ಕೂರದೆ ನಿಂತು ಕೊಂಡೇ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು‌. ಅಲ್ಲದೆ ಜನರ ಜೊತೆಗೆ ಆತ್ಮೀಯವಾಗ ಸಂವಾದವನ್ನು ಕೂಡಾ ನಡೆಸಿದರು‌. ಹೀಗೆ ಮಾತನಾಡುವಾಗ ಅವರು ತಮ್ಮ ರಾಜೀನಾಮೆಗೆ ಒಬ್ಬ ಮಹಿಳೆಯು ನೀಡಿದ ದೂರು ಕಾರಣವಾಯಿತೆಂಬ ಸತ್ಯವನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಅವರು ಪೊಲೀಸ್ ಸೇವೆಯಲ್ಲಿ ಇರುವಾಗ ಒಮ್ಮೆ ಮಹಿಳೆಯೊಬ್ಬರು ತಮ್ಮ ಗಂಡ ಕುಡಿದು ಬಂದು ದಿನವೂ ಹೊಡೆಯುತ್ತಾನೆ, ಕಾಪಾಡಿ ಎಂದು ದೂರು ನೀಡಿದ್ದಾಳೆ.

ಆ ದೂರಿನನ್ವಯ ಆಕೆಯ ಪತಿಯನ್ನು ವಿಚಾರಣೆ ಮಾಡಿದಾಗ, ಆತ ನಾನು 300 ರೂ ಸಂಪಾದಿಸ್ತೀನಿ ಅದರಲ್ಲಿ 200 ಖರ್ಚಾಗಿ ಉಳಿದ 100 ರೂ ಆಕೆಗೆ ಕೊಡ್ತೀನಿ. ಆದರೆ ಆಕೆ ಅದು ಸಾಲಲ್ಲ ಅಂತ ದಿನವೂ ಗಲಾಟೆ ಮಾಡ್ತಾಳೆ ಅದಕ್ಕೆ ಹೊಡೀತಿನಿ ಎಂದು ಉತ್ತರಿಸಿದ್ದಾನೆ. ಆಗ ಅಣ್ಣಾಮಲೈ ಅವರಿಗೆ ಅನಿಸಿದ್ದು, ಇದರಲ್ಲಿ ತಪ್ಪು ಯಾರದ್ದು? ಸಂಬಳ‌ ಕಡಿಮೆ ಬರೋದು ತಪ್ಪಾ ಅಥವಾ ಅವನು ಕುಡಿಯೋದು ತಪ್ಪಾ? ಎಂದು. ಸಂಬಳ ಹೆಚ್ಚು ಮಾಡಿಕೋ ಎಂದು ಸಲಹೆ ನೀಡುವುದು ಸರಿಯಾ? ಆದರೆ ಆ ಸಮಯದಲ್ಲಿ ಅವರು ಕುಡಿದು ಹೆಂಡತಿಯನ್ನು ಹೊಡೆಯುವುದು ತಪ್ಪು ಎಂದು ಆತನಿಗೆ ಮನವರಿಕೆ ಮಾಡಿ ಕಳಿಸಿದರಂತೆ.

ಆ ಘಟನೆಯ ನಂತರ ಮನಸ್ಸಿನಲ್ಲಿ ಮಾತ್ರ ಆ ಆಲೋಚನೆಗಳು ಹಾಗೇ ಉಳಿದು, ಇಂತಹ ಅದೆಷ್ಟೋ ಕುಟುಂಬಗಳು ನಮ್ಮ ಸಮಾಜದಲ್ಲಿದೆ. ಅಂತಹವರಿಗಾಗಿ ಏನಾದರೂ ಮಾಡಬೇಕು ಎಂಬ ಆಶಯದೊಂದಿಗೆ ಲೋಕಸಭಾ ಚುನಾವಣೆಯ ನಂತರ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ಅಣ್ಣಾಮಲೈ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ತಮ್ಮ ರಾಜೀನಾಮೆ ಹಿಂದಿನ ರೋಚಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here