ಅಣ್ಣಾಮಲೈ ಐಪಿಎಸ್ ಈ ಹೆಸರು ಕರ್ನಾಟಕದಲ್ಲಿ ಚಿತಪರಿಚಿತ. ಅವರು ತಮ್ಮ ಪೋಲೀಸ್ ಉದ್ಯೋಗಕ್ಕೆ ರಾಜೀನಾಮೆ ನೀಡಿರಬಹುದು. ಆದರೆ ಅವರ ಹೆಸರು ಮತ್ತು ಅವರು ಮಾಡಿದ ಕಾರ್ಯಗಳನ್ನು ಜನರು ಇಂದಿಗೂ ಸ್ಮರಿಸುವಂತೆ ಇದೆ. ಇದೇ ಅಣ್ಣಾ ಮಲೈ ಅವರ ಬಗ್ಗೆ ಮತ್ತೊಬ್ಬ ಪೋಲಿಸ್ ಅಧಿಕಾರಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಅಣ್ಣಾ ಮಲೈ ಅವರ ಶ್ಲಾಘನೆಯ ನುಡಿಗಳನ್ನು ಆಡಿದವರೂ ಕೂಡಾ ನಮ್ಮ ರಾಜ್ಯದಲ್ಲಿ ತನ್ನ ಕರ್ತವ್ಯ ನಿಷ್ಠೆಗೆ ಹೆಸರಾದ ಒಬ್ಬ ಪೊಲೀಸ್ ಅಧಿಕಾರಿ ಎನ್ನುವುದು ಕೂಡಾ ಒಂದು ವಿಶೇಷವೇ ಸರಿ‌. ಆ ಅಧಿಕಾರಿ ಮತ್ತಾರೂ ಅಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್.

ರವಿ.ಡಿ.ಚೆನ್ನಣ್ಣನವರ್ ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ, ಅವರು ಅಲ್ಲಿ ವಿದ್ಯಾರ್ಥಿಯೊಬ್ಬ ಅಣ್ಣಾಮಲೈ ರಾಜೀನಾಮೆಗೆ ರಾಜಕೀಯ ಒತ್ತಡ ಕಾರಣವೇ? ಎಂದು ಕೇಳಿದಾಗ ಅದಕ್ಕೆ ಉತ್ತರಿಸುತ್ತಾ ರವಿ ಡಿ ಚೆನ್ನಣ್ಣನವರ್ ಅಣ್ಣಾ ಮಲೈ ಅವರ ಬಗ್ಗೆ ಮಾತನಾಡಿದ್ದಾರೆ‌. ಅಣ್ಣಾ ಮಲೈ ಒಬ್ಬ ದೊಡ್ಡ ವ್ಯಕ್ತಿ. ಅವರು ನನಗಿಂತ ಹತ್ತು ಪಟ್ಟು ಹೆಚ್ಚು ಉತ್ತಮ ಅಧಿಕಾರಿಯಾಗಿದ್ದರು ಎಂದಿದ್ದು, ಅಂತಹವರು ಈ ರಾಜ್ಯ ಮತ್ತು ಪೊಲೀಸ್ ಇಲಾಖೆಯನ್ನು ಬಿಟ್ಟಿದು ಒಂದು ದೊಡ್ಡ ನಷ್ಟ ಎಂದಿದ್ದಾರೆ. ಅಣ್ಣಾಮಲೈ ಅಂತಹವರು ಅಪರೂಪದ ವ್ಯಕ್ತಿತ್ವ ಎಂದಿದ್ದಾರೆ ರವಿ ಡಿ ಚೆನ್ನಣ್ಣನವರ್.

ಅಣ್ಣಾಮಲೈ ಅವರಿಗೆ ಒಂದು ಕನಸಿದೆ‌. ನಾವೆಲ್ಲಾ ಅದಕ್ಕೆ ಬೆಂಬಲ ನೀಡೋಣ ಎಂದು ಹೇಳುತ್ತಲೇ, ಅವರು ಸಾರ್ವಜನಿಕ ಸೇವೆಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಮಾತನಾಡುತ್ತಾ, ನಾನು ರಾಜೀನಾಮೆ ನೀಡುತ್ತೇ‌ನೆ ಎಂದುಕೊಳ್ಳಬೇಡಿ. ನಾನು ಫುಲ್ ಫಾರ್ಮ ನಲ್ಲಿ ಇದ್ದೇನೆ‌. ಐಎಎಸ್ ಮತ್ತು ಐಪಿಎಸ್ ಹುದ್ದೆಗಳಲ್ಲಿ ಇದ್ದುಕೊಂಡು ಸಾವಿರಾರು ಜನರಿಗೆ ಸಹಾಯ ಮಾಡಬಹುದು. ನಾನು ಅದನ್ನೇ ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here