ನವರಸ ನಟ‌ನಾ ಅಕಾಡೆಮಿ ಪ್ರತಿಭಾವಂತ ಕಲಾವಿದರನ್ನು ಚಿತ್ರರಂಗಕ್ಕೆ ನೀಡಲು ಅವರಿಗೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಅರ್ಪಿಸುತ್ತಿರುವ, ಮಾಲೂರು ಶ್ರೀ ನಿವಾಸ್ ಹಾಗೂ ಸುಚಿತ್ರ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿದೆ ಒಂದು ಅಪರೂಪದ ಪ್ರೇಮ ದೃಶ್ಯ ಕಾವ್ಯ ಅಂತಃಸ್ಥ. ಮನ ಮುಟ್ಟುವಂತ ಹಾಗೂ ಭಾವನಾತ್ಮಕ ಕಥಾ ಹಂದರವನ್ನುಳ್ಳ ಈ ಕಿರುಚಿತ್ರವು ನೋಡುಗನ ಮನಸಿನಲ್ಲಿ ಈ ಕಥೆಯಲ್ಲಿ ಮುಂದೆ ಏನಿರಬಹುದೆಂಬ ಒಂದು ಕುತೂಹಲವನ್ನು ಕೂಡಾ ಕೆರಳಿಸುತ್ತದೆ. ಸಾಮಾನ್ಯವಾದ ಪ್ರೇಮ ಕಥೆಗಳಿಗಿಂತ ಭಿನ್ನವಾದ ಕಥೆಯನ್ನು ಈ ಕಿರು ಚಿತ್ರ ಹೊಂದಿದೆ.

ನವರಸ ನಟನಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ರಂಗನಾಥ ಹಿರೇಮಠ ಎಂಬ ಯುವ ನಿರ್ದೇಶಕನ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಕಿರು ಚಿತ್ರದಲ್ಲಿ ಪ್ರೇಮ ಕಥೆಯಲ್ಲಿ ಒಂದು ಯುವ ಪ್ರೇಮಿಗಳ ಕಥೆ ಇದೆಯಾದರೂ, ಆ ಪ್ರೇಮದ ಹಿಂದೆ ಕಥಾನಾಯಕಿಯ ಸ್ವಾರ್ಥವಿದೆಯೋ, ಅಥವಾ ಅದರ ಹಿಂದೆ ಮತ್ತಾವುದೋ ವಿಚಾರ ಅಡಗಿದೆಯೋ ಎಂಬ ಅನುಮಾನವನ್ನು ಹುಟ್ಟಿಸುತ್ತದೆ. ಇದು ಕಥೆಯ ಮೊದಲ ಭಾಗವಾಗಿದ್ದು, ಕಥೆಯ ಪ್ರಮುಖ ಎಳೆಯನ್ನಷ್ಟೇ ಇಲ್ಲಿ ಪರಿಚಯಿಸಲಾಗಿದೆ.

ಮುಂದಿನ ಕಥೆಯಲ್ಲಿ ನಾಯಕ ಹಾಗೂ ನಾಯಕಿ ಹೇಗೆ ತಮ್ಮ ಪ್ರೇಮವನ್ನು ಪಡೆಯುತ್ತಾರೆ.‌ ನಾಯಕಿಯ ಆ ಪ್ರೇಮವು ನಿಸ್ವಾರ್ಥವೋ ಅಲ್ಲವೋ ಎಂಬುದು ತಿಳಿಯುತ್ತದೆ. ಯುವ ನಿರ್ದೇಶಕನ ಒಂದು ಹೊಸ ಪ್ರಯತ್ನ ಹಾಗೂ ಮೊದಲ ಪ್ರಯತ್ನವಾಗಿ ಮೂಡಿರುವ ಅಂತಃಸ್ಥದಲ್ಲಿ ಭಾವನೆಗಳ ಮಿಡಿತವಿದ್ದು, ಅದು ಯಾವ ರೀತಿ ಮಿಡಿಯುತ್ತದೆ ಎಂಬುದನ್ನು ತಿಳಿಯಬೇಕಾದರೆ ಅದನ್ನು ನೋಡಲೇಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here