ಪರಭಾಷೆಯಲ್ಲಿ ಇರುವ ಅದೆಷ್ಟೋ ದಿಗ್ಗಜ ನಟ ನಟಿಯರಿಗೆ ಕನ್ನಡ ,ಕರ್ನಾಟಕ ಎಂದರೆ ಅಭಿಮಾನವಿದೆ. ಅದರಲ್ಲೂ ಕನ್ನಡಿಗರ ಕಣ್ಮಣಿ ವರನಟ ಡಾ.ರಾಜ್‍ಕುಮಾರ್ ಎಂದರೆ ಬಹುಶಃ ಎಲ್ಲಾ ಚಿತ್ರರಂಗದವರಿಗೂ ವಿಶೇಷವಾದ ಗೌರವ ಇದ್ದೇ ಇದೆ. ಬಾಲಿವುಡ್‌ ನ ಅಮಿತಾಬ್ ಬಚ್ಚನ್ , ರಜನಿಕಾಂತ್ ,ಚಿರಂಜೀವಿ ಸೇರಿದಂತೆ ಹಲವು ದಿಗ್ಗಜ ನಟರಿಗೆ ಇಂದಿಗೂ ಡಾ.ರಾಜ್‍ಕುಮಾರ್ ಆದರ್ಶ . ರಾಜ್ ಕುಮಾರ್ ಅವರ ಜನ್ಮದಿನ ಬಂತೆಂದರೆ ನಾಡಿನ ಪ್ರತಿಯೊಬ್ಬ ಕಲಾವಿದರು ಸಹ ಅಣ್ಣಾವ್ರನ್ನು ಸ್ಮರಿಸುತ್ತಾರೆ.  ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದರೂ ಸಹ ಆಂದ್ರಪ್ರದೇಶದ ಚಿತ್ರರಂಗದಲ್ಲಿ ಸುಪ್ರಸಿದ್ಧ ನಟಿಯಾಗಿ ಹೆಸರು ಮಾಡಿರುವ ಖ್ಯಾತ ನಟಿ ಅನುಷ್ಕಾ ಶೆಟ್ಟಿ

ಕನ್ನಡಿಗರ ಕಣ್ಮಣಿ ವರನಟ ಡಾ.ರಾಜ್‍ಕುಮಾರ್ ಅವರ ಜನ್ಮದಿನಕ್ಕೆ ತಮ್ಮ ಅಧಿಕೃತ ಫೇಸ್‌ಬುಕ್‌ ಅಕೌಂಟ್ ನಲ್ಲಿ ಶುಭಾಷಯ ತಿಳಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅನುಷ್ಕಾ ಶೆಟ್ಟಿ  ಒಬ್ಬ ಅದ್ಭುತವಾದ ಸಾಧಕರನ್ನು ಇ ದಿನ ನೆನೆಯಲು ಹೆಮ್ಮೆಯಾಗುತ್ತದೆ ಎಂದು ಬರೆದು ಶುಭಾಷಯ ತಿಳಿಸಿದ್ದಾರೆ. ಆದರೆ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಕುಟುಂಬದ ಚಿತ್ರದ ಮೂಲಕವೇ ಪದಾರ್ಪಣೆ ಮಾಡಿ ಖ್ಯಾತ ನಟಿಯಾಗಿ ಬೆಳೆದು ಸಂಸದರಾಗಿ ಆಯ್ಕೆ ಸಹ ಆದ ಕನ್ನಡದ ನಟಿ ರಮ್ಯಾ

 

ಅವರು ಎಲ್ಲಿಯೂ ಸಹ ರಾಜ್‍ಕುಮಾರ್ ಅವರನ್ನು ಸ್ಮರಿಸುವ ಕೆಲಸ ಅಥವಾ ಜನ್ಮದಿನಕ್ಕೆ ಶುಭಾಷಯ ಸಲ್ಲಿಸುವ ಪೋಸ್ಟ್ ಸಹ ಮಾಡಿಲ್ಲ. ಹೊರ ರಾಜ್ಯದ ಒಬ್ಬ ಸುಪ್ರಸಿದ್ಧ ನಟಿ ರಾಜ್‍ಕುಮಾರ್ ಅವನನ್ನು ನೆನೆಯುತ್ತಾರೆ. ಆದರೆ ನಮ್ಮವರೇ ಒಬ್ಬ ಮಹಾನ್ ವ್ಯಕ್ತಿಯನ್ನು ಮರೆಯುತ್ತಾರೆ. ಅದಕ್ಕೆ ಹೇಳೋದು ಕನ್ನಡ ಹಾಗೂ ಕರ್ನಾಟಕದ ಕೀರ್ತಿಯನ್ನು ಎತ್ತಿಹಿಡಿಯಬೇಕಾದ ಕನ್ನಡಿಗರೇ ಕನ್ನಡವನ್ನು ಮರೆಯುತ್ತಿದ್ದಾರೆ ಎಂದು‌………..

Remembering Dr Rajkumar sir on his 90th Birthday 🎂 💐Legend 🙏🏻

Anushka Shetty यांनी वर पोस्ट केले बुधवार, २४ एप्रिल, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here