ಟಾಲಿವುಡ್ ನಿಂದ ಚಿತ್ರರಂಗಕ್ಕೆ ಕಾಲಿಟ್ಟ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ನಂತರ ದಕ್ಷಿಣದ ಅರಿ ಬೇಡಿಕೆಯ ನಟಿಯಾಗಿ ಬೆಳೆದಿದ್ದು ಮಾತ್ರವೇ ಅಲ್ಲದೇ ತನ್ನದೇ ಆದ ಚಾರ್ಮ್ ನಿಂದ, ದಕ್ಷಿಣದ ಸಿ‌ನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ. ಅನುಷ್ಕಾ ಶೆಟ್ಟಿ ಸಿನಿಮಾಗಳು ಎಂದರೆ ಅಲ್ಲಿ ಅವರ ಪಾತ್ರಕ್ಕೊಂದು ವಿಶೇಷತೆ ಇದ್ದೇ ಇರುತ್ತದೆ ಎನ್ನುವುದು ಎಷ್ಟು ನಿಜವೋ, ನಾಯಕಿಯ ಪಾತ್ರವೇ ಹೈಲೈಟ್ ಎನ್ನುವ ದೊಡ್ಡ ಸಿನಿಮಾಗಳ ನಾಯಕಿ ಕೂಡಾ ಅನುಷ್ಕ ಎನ್ನುವ ಮಟ್ಟಕ್ಕೆ ಆಕೆ ಇಂದು ಬೆಳೆದು ನಿಂತಿದ್ದಾರೆ. ಹೀಗೆ ಅನುಷ್ಕಾ ಎನ್ನುವ ಹೆಸರಿನಿಂದ ಖ್ಯಾತಿ ಪಡೆದ ಈ ನಟಿಯ ನಿಜವಾದ ಹೆಸರು ಅನುಷ್ಕಾ ಅಲ್ಲವಂತೆ.

ಹೌದು, ಮಂಗಳೂರು ಬೆಡಗಿ ಅನುಷ್ಕಾ ಅವರನ್ನು ಸ್ವೀಟಿ ಎಂದೇ ಕರೆಯಲಾಗುತ್ತದೆ. ತೆಲುಗಿನಲ್ಲಿ ಅವರು ಸ್ವೀಟಿ ಎಂದೇ ಫೇಮಸ್ ಕೂಡಾ. ಇಲ್ಲಿನ ವಿಶೇಷ ಏನೆಂದರೆ ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಅವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಾಗ ಅಂದರೆ ಪೂರಿ ಜಗನ್ನಾಥ್ ಅವರ ನಿರ್ದೇಶನದ,‌ ನಾಗಾರ್ಜುನ ಅವರು ನಾಯಕ ನಟನಾಗಿ ನಟಿಸಿದ್ದ ಸೂಪರ್ ಸಿನಿಮಾದಲ್ಲಿ ಪೂರಿ ಜಗನ್ನಾಥ್ ಅಬರು ಸ್ವೀಟಿ ಶೆಟ್ಟಿಯವರ ಹೆಸರನ್ನು ಅನುಷ್ಕಾ ಎಂದು ಬದಲಾಯಿಸಿದರಂತೆ. ಹೀಗೆ ಅಲ್ಲಿಯವರೆಗೆ ಸ್ವೀಟಿ ಶೆಟ್ಟಿ ಆಗಿದ್ದವರು ಸೂಪರ್ ಸಿನಿಮಾದಿಂದ ಅನುಷ್ಕಾ ಶೆಟ್ಟಿಯಾದರು.

ಸೂಪರ್ ಸಿನಿಮಾಕ್ಕೆ ಹಾಡು ಹಾಡಲು ಬಂದಿದ್ದ ಒಬ್ಬ ಸಿಂಗರ್ ಹೆಸರು ಅನುಷ್ಕಾ. ನಿರ್ದೇಶಕರು ಆ‌ ಹೆಸರು ಚೆನ್ನಾಗಿದೆ ಎಂದು ಸ್ವೀಟಿ ಗೆ ಅನುಷ್ಕಾ ಎಂದು ಹೊಸ ಹೆಸರನ್ನು ಇಟ್ಟರು. ಹೀಗೆ ಅನುಷ್ಕಾ ಎನ್ನುವ ಹೆಸರಿನಿಂದಲೇ ಸ್ವೀಟಿ ಇಂದು ದಕ್ಷಿಣದ ಸುಪ್ರಸಿದ್ಧ ಹಾಗೂ ಬೇಡಿಕೆಯ ನಟಿಯಾಗಿ ಅಪಾರ ಅಭಿಮಾನಿಗಳನ್ನು ಪಡೆದು ಜನಾದರಣೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅನುಷ್ಕಾ ಎಂದರೆ ಇಂದು ಅವರ ಅರುಂಧತಿ, ಭಾಗಮತಿ, ಬಾಹುಬಲಿ ಅಂತಹ ಸೂಪರ್ ಹಿಟ್ ಸಿನಿಮಾಗಳು ನಮ್ಮ ಕಣ್ಮುಂದೆ ಬರುತ್ತವೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here