ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಟಿ ಅನುಷ್ಕ ಶೆಟ್ಟಿಯವರು, ತಾನು ಕನ್ನಡದವಳು ಎಂಬುದನ್ನು ಆಗಾಗ ನೆನಪಿಸುವಂತೆ, ವಿಶೇಷ ಸಂದರ್ಭಗಳಲ್ಲಿ ಕನ್ನಡದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾ, ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಯುಗಾದಿ ಹಬ್ಬದ ಪ್ರಯುಕ್ತ ಕೂಡಾ ನಟಿ ಅನುಷ್ಕ ಶೆಟ್ಟಿಯವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕನ್ನಡ ನಾಡಿನ ಎಲ್ಲರಿಗೂ ಹಬ್ಬದ ಶುಭಾಶಯವನ್ನು ಕೋರುತ್ತಲೇ,‌ ಕೊರೊನಾ ಕುರಿತಾಗಿ ಕೂಡಾ ಅವರು ಸಂದೇಶವನ್ನು ನೀಡಿದ್ದಾರೆ.

ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾದಲ್ಲಿ, “ಯುಗಾದಿ ಶುಭಾಶಯಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ಈ ಯುಗಾದಿಯು ಸಂತೋಷ ಹಾಗೂ ಸಮೃದ್ಧತೆಯನ್ನು ತರಲಿ. ನಾವೆಲ್ಲರೂ ಈ ಸಮಯವನ್ನು ಕುಟುಂಬದೊಂದಿಗೆ ಆನಂದಿಸೋಣ. ಸರ್ಕಾರದ ಆದೇಶದಂತೆ ಎಲ್ಲರೂ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ವಿನಂತಿಸುತ್ತೇನೆ” ಎನ್ನುವ ಮೂಲಕ ಕನ್ನಡದಲ್ಲಿ ಶುಭಾಶಯನ್ನು ಕೋರುವ ಜೊತೆಗೆ ಸರ್ಕಾರದ ಆದೇಶವನ್ನು ಕೂಡಾ ಪಾಲಿಸುವಂತೆ ಅವರು ಮನವಿಯನ್ನು ಮಾಡಿದ್ದಾರೆ.‌

ಈ ಹಿಂದೆ ತಮ್ಮ ತಾಯಿಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಕೂಡಾ ಅನುಷ್ಕ ಅವರು ಕನ್ನಡದಲ್ಲಿ ತಮ್ಮ ತಾಯಿಗೆ ಶುಭಾಶಯನ್ನು ಕೋರಿದ್ದರು‌.ಆಗ ಕೂಡಾ ಅಸಂಖ್ಯಾತ ಕನ್ನಡಿಗರು ಅದನ್ನು ಮೆಚ್ಚಿದ್ದರು. ಈಗ ಮತ್ತೊಮ್ಮೆ ಅನುಷ್ಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಮೂಲತಃ ಮಂಗಳೂರಿನವರಾದ ಅನುಷ್ಕ ತೆಲುಗು, ತಮಿಳು ಚಿತ್ರಗಳಲ್ಲೇ ಹೆಚ್ಚು ನಟಿಸಿದವರು. ಅದರಲ್ಲೂ ತೆಲುಗಿನಲ್ಲಿ ಅವರಿಗೆ ಇರುವ ಸ್ಥಾನವನ್ನು ಈ ದಶಮಾನದ ಇನ್ನಾವುದೇ ನಟಿ ಪಡೆದಿಲ್ಲ ಎಂಬುದು ವಿಶೇಷ‌.

ಯುಗಾದಿ ಶುಭಾಶಯಗಳು 😊ನಿಮಗೂ ಹಾಗು ನಿಮ್ಮ ಕುಟುಂಬದ ಎಲ್ಲರಿಗೂ ಈ ಯುಗಾದಿಯು ಸಂತೋಷ ಹಾಗು ಸಮೃದ್ಧತೆನ್ನು ತರಲಿ. ನಾವೆಲ್ಲರೂ ಈ ಸಮಯವನ್ನು…

Anushka Shetty यांनी वर पोस्ट केले बुधवार, २५ मार्च, २०२०

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here