ಕನ್ನಡ ಕಿರುತೆರೆಯಲ್ಲಿ ಅನುಶ್ರೀ ಎಂಬ ಹೆಸರು ಜನಜನಿತ. ನಾಡಿನುದ್ದಕ್ಕೂ ಅನುಶ್ರೀ ಅವರ ನಿರೂಪಣೆ ಮನೆ ಮಾತಾಗಿದೆ. ಸೌಂದರ್ಯ, ಸ್ಪಷ್ಟವಾದ ಮತ್ತು ಸಮಯೋಚಿತ ಮಾತುಗಾರಿಕೆ, ಸಂದರ್ಭಕ್ಕನುಗುಣವಾಗಿ ತೊಡುವ ವಿವಿಧ ಶೈಲಿಯ ಡ್ರೆಸ್ ಗಳು, ಆ ವಸ್ತ್ರ ವಿನ್ಯಾಸ ಎಲ್ಲವೂ ವಿಶೇಷವೇ. ಆಕೆ ಕನ್ನಡ ಮಾತನಾಡಲು ತೊಡಗಿದರೆ ಅದರಲ್ಲೇ ಮೈ ಮರೆಯುತ್ತಾರೆ ವೀಕ್ಷಕರು. ಅಂದಕ್ಕೆ ಅಂದ, ಮಾತಿಗೆ ಮಾತು ಎಂಬಂತೆ ಕನ್ನಡದ ಒಬ್ಬ ಪರ್ಫೆಕ್ಟ್ ನಿರೂಪಕಿ ಎಂಬ ಹೆಸರನ್ನು ಪಡೆದು, ಕನ್ನಡದ ಸ್ಟಾರ್ ನಿರೂಪಕಿಯಾಗಿ, ಕನ್ನಡದ ನಂಬರ್ ಒನ್ ನಿರೂಪಕಿ ಎಂಬ ಹೆಗ್ಗಳಿಕೆಗೆ ಕೂಡಾ ಭಾಜನರಾಗಿದ್ದಾರೆ ಆ್ಯಂಕರ್ ಅನು ಶ್ರೀ.

ಅನುಶ್ರೀ ಅವರ ನಿರೂಪಣೆ ಆರಂಭವಾಗಿದ್ದು ಮಂಗಳೂರಿನ ನಮ್ಮ ಟಿವಿ ಎಂಬ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ.
ಮುಂದೆ ಈ ಟಿವಿ ಕನ್ನಡದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನು ಶ್ರೀ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಮಾತ್ರವಲ್ಲದೆ, ನಿರೂಪಕಿಯಾಗಿ ಅನು ಶ್ರೀ ಅವರಿಗೆ ಡಿಮ್ಯಾಂಡ್ ಹೆಚ್ಚಾಯಿತು. ಅವರು ನಿರೂಪಣೆ ಮಾಡುವ ಶೋಗಳು ಕೂಡಾ ಜನಪ್ರಿಯವಾದಂತಹುವುಗಳೇ. ಸರಿಗಮಪ, ಡಾನ್ಸ್ ಕರ್ನಾಟಕ ಡಾನ್ಸ್ , ಕುಣಿಯೋಣು ಬಾರಾ ಹೀಗೆ ನಾಡಿನೆಲ್ಲಡೆ ಜನಾದರಣೆ ಕಂಡ ಕಾರ್ಯಕ್ರಮಗಳ ನಿರೂಪಕಿ ಎಂದರೆ ಅವರು ಅನು ಶ್ರೀ.

ಇಷ್ಟು ಡಿಮ್ಯಾಂಡ್ ಇರುವ ಈ ನಿರೂಪಕಿಯ ಸಂಭಾವನೆ ಎಷ್ಟು ಇರಬಹುದು?ಈ ಪ್ರಶ್ನೆ ಹಲವರಲ್ಲಿ ಇರುತ್ತದೆ. ನಿಜಕ್ಕೂ ನಿರೂಪಕಿಯಾಗಿ ಅನು ಶ್ರೀ ಅವರು ಪಡೆಯುವ ಸಂಭಾವನೆ ಆಶ್ಚರ್ಯ ಮೂಡಿಸುತ್ತದೆ. ಏಕೆಂದರೆ ಅವರು ಒಂದು ಎಪಿಸೋಡ್ ಗೆ ಒಂದು ಲಕ್ಷ, ಇಪ್ಪತ್ತು ಸಾವಿರ ಸಂಭಾವನೆ ಪಡೆಯುತ್ತಾರೆಂಬುದು ಸುದ್ದಿ. ಅನು ಶ್ರೀ ಅವರು ಕಿರುತೆರೆ ಮಾತ್ರವಲ್ಲದೇ, ಬೆಂಕಿಪೊಟ್ಣ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೂ ಲಗ್ಗೆ ಇಟ್ಟು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನು ಶ್ರೀ ಕನ್ನಡದ ಟಾಪ್ ನಿರೂಪಕಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here