ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶವನ್ನು 24 ದಿನಗಳ ಕಾಲ ಲಾಕ್ ಡೌನ್ ಮಾಡುವ ಆದೇಶವನ್ನು ಅಂದರೆ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ಲಾಕ್ ಡೌನ್ ಇನ್ನೂ ಮೂರು ತಿಂಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಹಲವರು ಈ ಬಗ್ಗೆ ಮೂರು ತಿಂಗಳು ಲಾಕ್ ಡೌನ್ ಆದರೆ ಜೀವನ ಹೇಗೆ? ಎಂದೆಲ್ಲಾ ಯೋಚನೆ ಮಾಡಲು ಕೂಡಾ ಆರಂಭಿಸಿದ್ದಾರೆ. ಆದರೆ ಈ ಕುರಿತಾಗಿ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಲಾಕ್ ಡೌನ್ ವಿಷಯವಾಗಿ ಸ್ಪಷ್ಟನೆ ಒಂದನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ ಲಾಕ್ ಡೌನ್ ವಿಸ್ತರಣೆಯ ವರದಿಗಳನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ಏಕೆಂದರೆ ಲಾಕ್ ಡೌನ್ ವಿಸ್ತರಣೆ ಮಾಡುವ ಯಾವುದೇ ಯೋಚನೆಯಿಲ್ಲ ಎಂದು ಅವರು ಹೇಳಿದ್ದಾರೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ಸರ್ಕಾರ ಮೂರು ತಿಂಗಳ ಆರ್ಥಿಕ ಪ್ಯಾಕೇಜ್ ಗಳನ್ನು ಹಾಗೂ ವಿವಿಧ ರೀತಿಯ ವಿನಾಯಿತಿ ಗಳನ್ನು ಘೋಷಣೆ ಮಾಡಿದೆ ಎಂದು ಅವರು ಹೇಳಿದ್ದಾರೆ.‌

ಅಗತ್ಯ ಸೇವೆಗಳನ್ನು ಒದಗಿಸಲು ಪರವಾನಗಿ ನೀಡಿರುವ ವಾಹನಗಳಿಗೆ ಜೂನ್ ವರೆಗೆ ಅವುಗಳ ಪರವಾನಗಿ ಇರಲಿದೆ ಎಂದು ತಿಳಿಸಿರುವ ಅವರು, ಅಲ್ಲಿ ವಾಹನಗಳಿಗೆ ನೀಡಲಾದ ಪಾಸ್ ಗಳ ವ್ಯಾಲಿಡಿಟಿ ಜೂನ್ ವರೆಗೆ ಇರುವುದರಿಂದ ಹೀಗಾಗಿ ಲಾಕ್ ಡೌನ್ ಕೂಡಾ ವಿಸ್ತರಣೆ ಆಗಬಹುದೆಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯನ್ನು ಹಬ್ಬಿಸಲಾಗಿದೆ ಎಂದಿದ್ದು, ಸದ್ಯಕ್ಕೆ ಸರ್ಕಾರಕ್ಕೆ ಅಂತಹ ಆಲೋಚನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here