ಎ.ಆರ್.ರೆಹಮಾನ್ ಈ ಹೆಸರು ಕೇಳದ ಚಿತ್ರ ರಸಿಕರಾಗಲಿ, ಸಂಗೀತ ಪ್ರಿಯರಾಗಲೀ ಇಲ್ಲ. ಸಂಗೀತದಲ್ಲಿ ಅವರು ಮಾಡಿದ ಸಾಧನೆ ಅವರಿಗೆ ಚಿತ್ರಸೀಮೆಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದ ಮಹಾ ಸಾಧಕ ಎ‌.ಆರ್‌‌.ರೆಹಮಾನ್. ಅವರು ಸಂಗೀತ ಸಂಯೋಜಿಸಿದ ಹಾಡುಗಳು ಕೇಳುಗರ ಮನಸ್ಸಿನ ಆಳಕ್ಕೆ ಇಳಿದು, ಹೊಸ ಲೋಕದಲ್ಲಿ ತೇಲುಸುತ್ತವೆ. ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು, ಸ್ಥಾನವನ್ನು ಪಡೆದಿರುವ ಸಂಗೀತ ಲೋಕದ ದಿಗ್ಗಜ ಎ.ಆರ್.ರೆಹಮಾನ್. ಅವರ ಜೀವನದ ಹಾದಿಯೇ ಒಂದು ದಂತಕಥೆ ಹಾಗೂ ನೂರಾರು ಸಂಗೀತಗಾರರಿಗೆ ಪ್ರೇರಣೆಯಾಗಿದೆ. ಆದರೆ ಇಷ್ಟು ಮಟ್ಟದ ಹೆಸರನ್ನು ಪಡೆದ ರೆಹಮಾನ್ ಅವರು ಕೂಡಾ ಒಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ್ದರಂತೆ.

ಆದರೆ ಜೀವನದ ಸವಾಲುಗಳನ್ನು ಎದುರಿಸುತ್ತಾ, ಎದುರಿಸುತ್ತಾ ಅವರು ಧೈರ್ಯದಿಂದ ಮುಂದುವರೆದು ಇಂದಿನ ಲೆಜೆಂಡರಿ ಸ್ಥಾನವನ್ನು ಪಡೆದರು ಎಂಬುದು ನಿಜವಾಗಿಯೂ ಒಂದು ಪ್ರೇರಣೆಯ ಕಥೆಯಾಗಿದೆ. ರೆಹಮಾನ್ ಅವರು ತಮ್ಮ ಇಪ್ಪತ್ತೈದನೆಯ ವಯಸ್ಸಿನವರೆಗೂ ಆತ್ಮಹತ್ಯೆಯ ಆಲೋಚನೆ ಮಾಡುತ್ತಿದ್ದರಂತೆ. ವೃತ್ತಿ ಜೀವನದಲ್ಲಿ ಸೋತೆನೆಂಬ ಅವರ ಭಾವನೆಯು ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗೆ ಕಾರಣವಾಗಿತ್ತಂತೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಅವರಿಗೆ ಆದ ಬೇಸರ ಹಾಗೂ ಜೀವನದಲ್ಲಿ ಏನೋ ಕಳೆದುಕೊಂಡ ಭಾವನೆಯು ಅವರನ್ನು ನೋವಿನತ್ತ ನೂಕಿತ್ತು ಎನ್ನಲಾಗಿದೆ.

ಆತ್ಮವಿಶ್ವಾಸ ಕಳೆದುಕೊಂಡ ಅವರ ಜೀವನದಲ್ಲಿ ಅಹಿತಕರ ಹಾಗೂ ನೋವುಂಟು ಮಾಡುವ ಅನೇಕ ಘಟನೆಗಳು ನಡೆದು, ಜೀವನದ ಮೇಲೆ ಆಸಕ್ತಿ ಕಳೆದುಕೊಳ್ಳುವಂತೆ ಪರಿಸ್ಥಿತಿ ನಿರ್ಮಾಣವಾಗಿದ್ದವು. ಸಾವಿ‌ನ ಆಲೋಚನೆಯು ಅವರಿಗೆ ತಮ್ಮ ಕೆಲಸದ ಬಗ್ಗೆ ಆಸಕ್ತಿ ಹಾಗೂ ಏಕಾಗ್ರತೆ ಮೂಡಿಸಲು ಅಡ್ಡಗಾಕಲು ಆಗಿತ್ತಂತೆ. ಆದರೆ ಸಾವು ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ದಿನ ಬರಲೇ ಬೇಕು ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ಅವರು ಆ ನೋವು, ದುಃಖ ಹಾಗೂ ನಿರಾಸೆಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸಿನ ಉನ್ನತ ಶಿಖರವನ್ನು ತಲುಪಿದರು. ದಿಲೀಪ್ ಕುಮಾರ್ ಎಂಬ ತಮ್ಮ ಹೆಸರನ್ನು ಬಿಟ್ಟು ಇಸ್ಲಾಂ ಸ್ವೀಕರಿಸಿದ ದಿನದಿಂದಲೇ ಹಳೆಯ ಜೀವನವನ್ನು ಬಿಟ್ಟು, ಸಂಗೀತ ಕ್ಷೇತ್ರದ ದಿಗ್ಗಜನಾದ ಅವರ ಜೀವನಗಾಥೆ ಇಂದು ಯಶೋಗಾಥೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here