ಆಕ್ಸನ್ ಕಿಂಗ್ ಅರ್ಜುನ್ ಸರ್ಜಾ ಅವರ ಮನೆಗೆ ಈಗ ಹೊಸ ಅತಿಥಿಯಾಗಿ ಹಸುವೊಂದು ಬಂದಿದೆ. ದಕ್ಷಿಣ ಭಾರತದ ಖ್ಯಾತ ನಟರಾಗಿರುವ ಅರ್ಜುನ್ ಸರ್ಜಾ ಅವರು ಮೂಲತಃ ನಮ್ಮ ಕರ್ನಾಟಕದವರು. ಚಿಕ್ಕಂದಿನಿಂದಲೇ ಅರ್ಜುನ್ ಸರ್ಜಾ ಅವರು ಆಂಜನೇಯಸ್ವಾಮಿಯ ಭಕ್ತ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆಂಜನೇಯಸ್ವಾಮಿ ಮೇಲಿನ ಭಕ್ತಿಗೆ ಚೆನೈನ ತಮ್ಮ ನಿವಾಸದಲ್ಲೇ ಏಕಶಿಲಾ ಆಂಜನೇಯಸ್ವಾಮಿ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸುವ ಅರ್ಜುನ್ ಸರ್ಜಾ ಅವರ ನಿವಾಸಕ್ಕೆ ಈಗ ಪುಣ್ಯಕೋಟಿ ಹಸುವಿನ ಆಗಮನವಾಗಿದೆ. ಅರ್ಜುನ್ ಸರ್ಜಾ ಅವರ ನಿವಾಸಕ್ಕೆ ಪುಣ್ಯಕೋಟಿ ಬರಲು ಕಾರಣ ಯಾರು ಅಂತೀರಾ ?

ಇತ್ತೀಚೆಗೆ ತಾನೆ ಪ್ರೇಮಬರಹ ಚಿತ್ರದ ಮೂಲಕ ಸದ್ದು ಮಾಡಿದ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಇದೀಗ ತಮ್ಮ‌ ತದೆ ಅರ್ಜುನ್ ಸರ್ಜಾ ಅವರಿಗೆ ಸುಂದರವಾದ ಪುಣ್ಯಕೋಟಿ ಹಸುವನ್ನು ಉಡುಗಿರೆಯಾಗಿ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಐಶ್ವರ್ಯ ಅರ್ಜುನ್ ಮತ್ತು ಅರ್ಜುನ್ ಸರ್ಜಾ ಸೋಷಿಯಲ್ ಮೀಡಿಯಾದ ತಮ್ಮ ಫೇಸ್‌ಬುಕ್‌ ಪೇಜ್ ನಲ್ಲಿ‌ ಹಂಚಿಕೊಂಡಿದ್ದಾರೆ.ಹಸುವನ್ನು ತಂದೆಗೆ ಉಡುಗೊರೆಯಾಗಿ ಕೊಟ್ಟಿರುವ ಬಗ್ಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಸಹ ಸೋಷಿಯಲ್ ಮೀಡಿಯಾದಲ್ಲಿ ಖುಷಿಯಾಗಿ ಹಂಚಿಕೊಂಡಿದ್ದಾರೆ.

ಕಂದು ಬಣ್ಣದ ಈ ಹಸುವಿನ ಚೆಲುವಿಗೆ ಮನಸೋತಿರುವ ಅರ್ಜುನ್ ಸರ್ಜಾ ಅವರು ನನ್ನ ಮಗಳು ಐಶ್ವರ್ಯ ಅರ್ಜುನ್ ಅವರು ನನಗೆ ಸುಂದರವಾದ ಪುಣ್ಯಕೋಟಿ ಹಸುವನ್ನು ಉಡುಗೊರೆಯಾಗಿ‌ ನೀಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪುಣ್ಯಕೋಟಿ ಹಸು ಮನೆಗೆ ಬಂದ ಕೂಡಲೇ ಅದಕ್ಕೆ ಪೂಜೆ ಸಲ್ಲಿಸಿ ಬರಮಾಡಿಕೊಂಡಿರುವ ಅರ್ಜುನ ಸರ್ಜಾ ಅವರ ಕುಟುಂಬ ಅದಕ್ಕೆ ಆಹಾರವನ್ನು ತಾವೇ ತಟ್ಟೆಯ ಮೂಲಕ ತಿನ್ನಿಸುತ್ತಿರುವ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here