ಇದೇ ಮೊದಲ ಬಾರಿಗೆ ಮೀಟೂ ಆರೋಪದ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅರ್ಜುನ್ ಸರ್ಜಾ ಅವರು ಮಾತನಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಸಭೆಯು ವಿಫಲವಾದ ನಂತರ ಸುದ್ದಿಗೋಷ್ಠಿಯಲ್ಲಿ ಅರ್ಜುನ್ ಸರ್ಜಾ ಅವರು ಖಡಕ್ ಆಗಿ ಕಡ್ಡಿ ತುಂಡಂತೆ ಮಾತನಾಡಿದರು. ಕಾಂಪ್ರಮೈಸ್ ಎನ್ನುವ ಮಾತೇ ಇಲ್ಲ ನಾನು ಈಗ ಯಾವುದೇ ಹೇಳಿಕೆ ನೀಡಲ್ಲ. ನನ್ನ ವಿರುದ್ದ ಆರೋಪ ಮಾಡಿದವರ ವಿರುದ್ದ ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾಗಿದೆ. ನನ್ನ  ವಿರುದ್ದ ಯಾರು ಯಾರು ಷಡ್ಯಂತ್ರ ರೂಪಿಸಿದ್ದಾರೆ. ಅವರ ಎಲ್ಲಾ ಅಸಲಿ ರೂಪಗಳನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇನೆ. ನಾನು ಕನ್ನಡ ಚಿತ್ರರಂಗಕ್ಕೆ ಗೌರವ ನೀಡುತ್ತೇನೆ. ಹೀಗಾಗಿ ಇಲ್ಲಿಗೆ ಬಂದಿದ್ದೇನೆ ಆದರೆ ಕಾಂಪ್ರಮೈಸ್ ಮಾತೇ ಇಲ್ಲ.

ನಾನು ಸುಮ್ಮನೆ ಕೂರುವುದಿಲ್ಲ‌ ನನ್ನ ಕುಟುಂಬದ ಸದಸ್ಯರು ತಲೆ ಎತ್ತಿ‌ ಓಡಾಡದಂತೆ ಮಾಡಲಾಗುತ್ತಿದೆ. ನನ್ನ ಮಾನ ಹರಾಜು ಹಾಕಲಾಗಿದೆ.ನನ್ನ ಇಷ್ಟು ವರ್ಷಗಳ ಚಿತ್ರ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ ಆದರೆ ಈಗ ನನ್ನ ಮೇಲೆ ಇಂತಹ ಆರೋಪ ಕೇಳಿ ಬಂದಿರುವುದು ಹೇಳಿಕೊಳ್ಳಲಾಗದಷ್ಟು ನೋವು ನೀಡಿದೆ.ನಾನು ಈಗಾಗಲೇ ಶೃತಿ ಹರಿಹರನ್ ವಿರುದ್ದ ಕೋರ್ಟ್ ಮೆಟ್ಟಿಲು ಹತ್ತಿದ್ದೇನೆ. ಇಂತಹ ಸಮಯದಲ್ಲಿ ಹೆಚ್ಚಿಗೆ ಮಾತಾಡುವುದು ಸರಿ‌ ಇಲ್ಲ. ಎಲ್ಲವನ್ನೂ ಕೋರ್ಟ್ ಬಗೆಹರಿಸುತ್ತದೆ.

ನಾನು ವಾಣಿಜ್ಯ ಮಂಡಳಿಗೆ ಗೌರವಿಸುತ್ತೇನೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನನಗೆ ತಾಯಿ ಇದ್ದಂತೆ. ಅಂಬರೀಶ್ ಸರ್ ,ಮುನಿರತ್ನ , ರಾಕ್ ಲೈನ್ ವೆಂಕಟೇಶ್  , ಅವರಿಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ  ಎಂದು ಅರ್ಜುನ್ ಸರ್ಜಾ ತಿಳಿಸಿದರು. ಅಂಬರೀಶ್ ಅವರು ಮಾತನಾಡುವ ಸಮಯದಲ್ಲಿ ಅರ್ಜುನ್ ಸರ್ಜಾ ಅವರು ಆಗಮಿಸಿ ಈ ವಿಷಯ ತಿಳಿಸಿದ್ದಾರೆ‌ ಈ ವೇಳೆ ಭಾವನಾತ್ಮಕ ಹಾಗೂ ಆಕ್ರೋಶ ವಾಗಿ ಅರ್ಜುನ್ ಸರ್ಜಾ ಕಂಡುಬಂದರು..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here