ಶೃತಿ ಹರಿಹರನ್ ಈ ಹೆಸರು ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನದ ಭಾಗವಾಗಿ ದಕ್ಷಿಣದ ಸುಪ್ರಸಿದ್ಧ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಶೋಷಣೆಯ ಆರೋಪ ಹೊರೆಸಿ ಸಂಚಲನವನ್ನು ಸೃಷ್ಟಿಸಿದ್ದರು. ಅಲ್ಲದೆ ಫಿಲಂ ಚೇಂಬರ್ ನಲ್ಲಿ ಕೂಡಾ ಅರ್ಜುನ್ ಹಾಗೂ ಶೃತಿ ಹರಿಹರನ್ ನಡುವೆ ಸಂಧಾನ ನಡೆಸಲು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದುದು ಕೂಡಾ ಗೊತ್ತಿರುವ ವಿಷಯ. ಇದಾದ ಮೇಲೆ ಅರ್ಜುನ್ ಸರ್ಜಾ ಅವರು ಶೃತಿ ಹರಿಹರನ್ ಮೇಲೆ ಮಾನ ನಷ್ಟ ಮೊಕದ್ದಮೆಯನ್ನು ಹೂಡಿ, ತನ್ನ ಮೇಲೆ ಸುಳ್ಳು ಆರೋಪ ಮಾಡಿದವರ ಜೊತೆಗೆ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

ಅದಾದ ನಂತರ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ದ ಎಫ್ಐಆರ್ ದಾಖಲಿಸಿದ್ದರು. ಈ ಸಂಬಂಧದಲ್ಲಿ ಅರ್ಜುನ್ ಸರ್ಜಾ ಅವರ ಬಂಧನದ ಕುರಿತಾಗಿ ಹಾಗೂ ಎಫ್ಐಆರ್ ರದ್ದು ಮಾಡಬೇಕೆಂದು ಅರ್ಜುನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿ, ಅವರ ವಿರುದ್ಧ ಲೈಂಗಿಕ ಆರೋಪಣೆಯೇನಿದೆ ಅದಕ್ಕೆ ಸಂಬಂಧ ಅವರನ್ನು ಬಂಧಿಸಬಾರದೆಂದು ಕೋರ್ಟ್ ಆದೇಶ ಹೊರಡಿಸಿದ್ದು, ಅರ್ಜುನ್ ಸರ್ಜಾ ಅವರಿಗೆ ಸ್ವಲ್ಪ ಮಟ್ಟಿಗೆ ಈ ಆದೇಶ ರಿಲೀಫ್ ನೀಡಿದೆ ಎನ್ನಬಹುದಾಗಿದೆ. ಅಲ್ಲದೆ ಅವರ ಮೇಲಿನ ಆರೋಪಗಳಿಗೆ ಅವರು ಕೋರ್ಟಿನ ಮೊರೆ ಹೋಗಿ ನ್ಯಾಯದ ವಿಧಾನದಲ್ಲಿ ತಮ್ಮ ಪ್ರಕ್ರಿಯೆ ಮುಂದುವರೆಸಿದ್ದಾರೆ.

ಬಿ.ವಿ‌.ಆಚಾರ್ಯಾ ಅವರು ತಮ್ಮ ಕಕ್ಷಿದಾರನಾದ ಅರ್ಜುನ್ ಸರ್ಜಾ ಅವರನ್ನು ಶೃತಿ ಹರಿಹರನ್ ಮಾಡಿರುವ ಆರೋಪದ ಅಡಿಯಲ್ಲಿ ಯಾವುದೇ ರೀತಿಯಲ್ಲಿ ಕ್ರಮಕ್ಕೆ ಮುಂದಾಗಬಾರದೆಂದು ಮಾಡಿದ್ದ ಕೋರಿಕೆಯನ್ನು ಮನ್ನಿಸಿರುವ ನ್ಯಾಯಪೀಠ, ಈ ವಿಚಾರ ಸುಮಾರು ಮೂರುವರ್ಷಗಳಷ್ಟು ಹಿಂದಿನದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಬಂಧಿಸುವ ಅಗತ್ಯವಿಲ್ಲ, ಎಂದು ಹೇಳಿರುವ ಕೋರ್ಟ್ ಈ ಮೊಕದ್ದಮೆಗೆ ಸಂಬಂಧಪಟ್ಟಂತೆ ಮುಂದಿನ ತನಿಖೆಯನ್ನು ನಡೆಸಲು ಅನುಮತಿಯನ್ನು ನೀಡಲಾಗಿದೆ. ಕೋರ್ಟ್ ನ ಈ ಆದೇಶದಿಂದ ಅರ್ಜುನ್ ಸರ್ಜಾ ಅವರ ಬಂಧನ ಭೀತಿಯಂತೂ ಸದ್ಯಕ್ಕೆ ನಿವಾರಣೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here