ಭಾರತದ ಅತ್ಯಂತ ಹಳೆಯ ಮೈದಾನಗಳಲ್ಲಿ ಒಂದು ಎನಿಸಿದ್ದ ಫಿರೋಜ್ ಶಾ ಕೋಟ್ಲಾ ಮೈದಾ‌ನವನ್ನು ಇನ್ನು ಮುಂದೆ ಆ ಹೆಸರಿನಿಂದ ಕರೆಯಲಾಗುವುದಿಲ್ಲ. ಏಕೆಂದರೆ ಈ ಮೈದಾನದ ಹೆಸರನ್ನು ಬದಲಾಯಿಸಲು ಡೆಲ್ಲಿ ಕ್ರಿಕೆಟ್ ಕ್ರಿಕೆಟ್ ಸಂಸ್ಥೆ ನಿರ್ಧಾರವನ್ನು ಮಾಡಿದ್ದು, ಇನ್ನು ಮುಂದೆ ಈ ಫೀರೋಜ್ ಶಾ ಕೋಟ್ಲಾ ಮೈದಾನ ವನ್ನು ಅರುಣ್ ಜೇಟ್ಲಿ ಮೈದಾನ ಎಂದು ಕರೆಯಲಾಗುವುದು. ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ಅರುಣ್ ಜೇಟ್ಲಿ ಅವರು ಇದೇ ಆಗಸ್ಟ್ 24ರಂದು ಕೊನೆಯುಸಿರೆಳೆದಿದ್ದರು. ಅವರ ಗೌರವ ಸೂಚಕವಾಗಿ ಈಗ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಮರು ನಾಮಕರಣ ಮಾಡಲು ಡೆಲ್ಲಿ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

ಈಗಾಗಲೇ ತೀರ್ಮಾನಿಸಿರುವಂತೆ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಉದ್ಘಾಟನೆಯಾಗಲಿರುವ ದಿನ ಅಂದರೆ ಸೆಪ್ಟೆಂಬರ್ 12ರ ಅದೇ ದಿನ ಅರುಣ್ ಜೇಟ್ಲಿ ಮೈದಾನ ಎಂದು ಫೀರೋಜ್ ಶಾ ಕೋಟ್ಲಾ ಮೈದಾನವು ಹೊಸ ಹೆಸರನ್ನು ಪಡೆಯಲಿದೆ‌‌ ಎಂದು ಎಂದು ಡೆಲ್ಲಿ ಕ್ರಿಕೆಟ್ ಸಂಸ್ಥೆ ಟ್ವೀಟ್ ಮೂಲಕ ತಿಳಿಸಿ ಅದನ್ನು ಖಚಿತಪಡಿಸಿದೆ. ಅರುಣ್ ಜೇಟ್ಲಿಯವರು 1999 ರಿಂದ 2013ರವರೆಗೆ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಮೈದಾನದಲ್ಲಿ ಆಸನ ವ್ಯವಸ್ಥೆ, ವಿಶ್ವ ಮಟ್ಟದ ಡ್ರೆಸ್ಸಿಂಗ್ ರೂಂ, ಅತ್ಯಾಧುನಿಕ ಸೌಲಭ್ಯ ಒದಗಿಸಿದ್ದರು.

ಆ ಮೂಲಕ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೊಂದು ಹೊಸ ರೂಪವನ್ನು ನೀಡವಲ್ಲಿ ಶ್ರಮ ವಹಿಸಿದ್ದರು. ಮೈದಾನದ ಪುನರ್ ನಾಮಕರಣ ಸಮಾರಂಭವು ಜವಹರ್ ಲಾಲ್ ಮೈದಾನದಲ್ಲಿ ನಡೆಯಲಿದ್ದು, ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಅರುಣ್ ಜೇಟ್ಲಿ ಅವರು ನೀಡಿದ ಸಹಕಾರ ಹಾಗೂ ಪ್ರೋತ್ಸಾಹದಿಂದಲೇ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ರಂತಹ ಪ್ರತಿಭಾವಂತ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ದೊರೆಯಿತು ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here