ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ನಿಧನರಾದರು. ಅವರ ನಿಧನಾನಂತರ ಇಡೀ ದೇಶ ಹಾಗೂ ಗಣ್ಯರು , ಹಾಗೂ ಬಾಲಿವುಡ್ ನಟ ನಟಿಯರು, ಕ್ರೀಡಾ ಪಟುಗಳು ಸಂತಾಪವನ್ನು ಸೂಚಿಸಿದ್ದಾರೆ. ಇವರೆಲ್ಲರ ನಡುವೆ ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಗಳಿಸಿದ ನಟಿ ರಾಖಿ ಸಾವಂತ್ ಅವರು ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು ಈಗ ಟ್ರೋಲಿಂಗ್ ಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ರಾಖಿ ಸಾವಂತ್ ಟ್ರೋಲಾಗಲು ಕಾರಣ ಏನೆಂದರೆ ಆಕೆ ನೀಡಿರುವ ಒಂದು ವಿಪರೀತ ಎನಿಸುವ ಹೇಳಿಕೆಯಾಗಿದೆ.

ರಾಖಿ ಸಾವಂತ್ ತಮ್ಮ ವಿಡಿಯೋದಲ್ಲಿ ಮಾತನಾಡುತ್ತಾ ಬಿಜೆಪಿ ನಾಯಕ ಜೇಟ್ಲಿ ಈಗ ನಮ್ಮ ನಡುವೆ ಇಲ್ಲ. ಆದರೆ ಅವರ ಸಾವಿನ ವಿಷಯವನ್ನು ನಾನು ಒಂದು ವಾರ ಅಲ್ಲ 10 ದಿನದ ಮೊದಲೇ ಹೇಳಿದ್ದೆ. ನನಗೆ ಇಂತಹ ಕನಸುಗಳು ಬರುತ್ತವೆ. ನನಗೆ ಇಂತ ವಿಷಯಗಳು ಗೊತ್ತಾಗಿ ಬಿಡುತ್ತದೆ. ಇದೊಂದು ಈಶ್ವರೀಯ ಶಕ್ತಿ. ಭಗವಂತ ನನಗೆ ಇಂತಹ ಶಕ್ತಿಯನ್ನು ಕರುಣಿಸಿರುವುದಕ್ಕೆ ಆ ದೇವರಿಗೆ ಧನ್ಯವಾದಗಳು ಎಂದಿರುವ ಆಕೆ ಅರುಣ್ ಜೇಟ್ಲೀ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಅವರ ಆರ್ಥಿಕ ನೀತಿಗಳನ್ನು ಹೊಗಳಿದ್ದಾರೆ. ಇಡೀ ಭಾರತ ಅವರನ್ನು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಅನಂತರ ಅವರು ನಾವು ಹುಟ್ಟಿದಾಗ ಏನೂ ತರುವುದಿಲ್ಲ, ಹೋಗುವಾಗಲೂ ಏನೂ ತೆಗೆದುಕೊಂಡು ಹೋಗಲ್ಲ‌. ಇರುವುದು ಒಂದೇ ಜೀವನ ಅದಕ್ಕೆ ದೇಶ, ನೆರೆ ಹೊರೆ, ಹಾಗೂ ಕುಟುಂಬದ ಬಗ್ಗೆ ಯೋಚಿಸಿ‌. ಹಿರಿಯರ ಸೇವೆ ಮಾಡಿ ಎಂದು ಕೂಡಾ ಉಪದೇಶ ನೀಡಿದ್ದಾರೆ. ಇಷ್ಟೆಲ್ಲಾ ಹೇಳಿದ ರಾಖಿ ಮಾತ್ರ ಅರುಣ್ ಜೇಟ್ಲಿಯವರ ಸಾವು ತನಗೆ ಹತ್ತು ದಿನದ ಮೊದಲೇ ಗೊತ್ತಿತ್ತು ಎಂದು ಹೇಳಿದ ಮಾತಿನಿಂದ ಈಗ ಟ್ರೋಲ್ ಆಗಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here