ಗಡಿಯಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿ ಹಲವು ಕಡೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಹೈ ಅಲರ್ಟ್ ಮಾಡಿದ್ದ ಸ್ಥಳಗಳಲ್ಲಿ ಸ್ವಲ್ಪ ಸಡಿಲಿಸಲಾಗಿದೆ. ಈ ನಡುವೆಯೇ ಭಾರತದ ಸಚಿವರಾದ ಅರುಣ್ ಜೇಟ್ಲಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಪಾಕಿಸ್ತಾನದ  ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಭಾರತ ವಾಯುಪಡೆ ಈಗಾಗಲೇ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ಮಳೆಗರೆದು 300 ಕ್ಕೂ ಹೆಚ್ಚು ಉಗ್ರರನ್ನು ನಿರ್ನಾಮ ಮಾಡಿದೆ. ಅಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಭಾರತದ ಸೇನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸುತ್ತಿದೆ.

ಈ ನಡುವೆಯೇ ವಿತ್ತ ಸಚಿವ ಅರುಣ್ ಜೇಟ್ಲಿ, ಸುದ್ಧಿಗೋಷ್ಠಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದು, ಅಮೆರಿಕಾಗೆ ತಲೆನೋವಾಗಿದ್ದ ಒಸಾಮ ಬಿನ್ ಲ್ಯಾಡನ್ ಹತ್ಯೆ ಕಾರ್ಯಾಚರಣೆಯ ಉದಾಹರಣೆ ನೀಡಿದ್ದಾರೆ.  ಅಮೆರಿಕಾಗೆ ಪಾಕಿಸ್ತಾನದಲ್ಲಿದ್ದ ಒಸಾಮ ಬಿನ್ ಲ್ಯಾಡನ್ ನ್ನು ಪಾಕಿಸ್ತಾನಕ್ಕೇ ನುಗ್ಗಿ ಹತ್ಯೆ ಮಾಡಬಹುದಾದರೆ ಅಂತಹ ಕಾರ್ಯಾಚರಣೆ ಭಾರತಕ್ಕೆ ಏಕೆ ಸಾಧ್ಯವಿಲ್ಲ, ಯಾವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಅಭಿಪ್ರಾಯ ಪಟ್ಟಿದ್ದಾರೆ. ಉಗ್ರವಾದ ಎಂಬುದು ಯಾವ ರಾಷ್ಟ್ರಕ್ಕೂ ಒಳಿತಲ್ಲ. ಪಾಕಿಸ್ತಾನವೇ ಭಯೋತ್ಪಾದಕರ ಅಂತ್ಯ ಕಾಣಿಸಬೇಕಿದೆ. ಆದರೆ ಈಗ ಪಾಕಿಸ್ತಾನವೇ ಉಗ್ರರಿಗೆ ನೆಲೆ ನೀಡುತ್ತಿರುವುದು ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here