ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ಭಾರತವು ಮುಸ್ಲಿಮರನ್ನು ದಮನ ಮಾಡುವುದಕ್ಕೆ ಕೊರೊನಾ ವೈರಸ್ ಪಿಡುಗನ್ನು ದುರ್ಬಳಕೆ ಮಾಡುತ್ತಿದೆಯೆಂಬ ಗಂಭೀರ ಆರೋಪವನ್ನು ಮಾಡಿದ್ದಾರೆ ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಎಂದು ಗುರುತಿಸಲ್ಪಟ್ಟಿರುವ ಅರುಂಧತಿ ರಾಯ್. ಆಕೆ ಸರ್ಕಾರ ಬಳಸುತ್ತಿರುವ ತಂತ್ರವನ್ನು ಜರ್ಮಿನಿಯ ನಿರಂಕುಶ ಆಡಳಿತಗಾರ ಹಿಟ್ಲರ್ ನ‌ ಕಾಲದಲ್ಲಿ ನಾಜಿಗಳು ಯೆಹೂದಿಗಳ ಸಾಮೂಹಿಕ ಹತ್ಯಾಕಾಂಡ ಮಾಡುತ್ತಿದ್ದ ವಿಧಾನವಾದ ಹಾಲೋಕಾಸ್ಟ್ ಪದವನ್ನು ಬಳಿಸಿ ಭಾರತ ಸರ್ಕಾರದ ಮೇಲೆ ಆರೋಪವನ್ನು ಮಾಡಿದ್ದಾರೆ.

ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ಆಕೆ ಭಾರತವು ಹಿಂದೂ ಮತ್ತು ಮುಸ್ಲಿಂ ರ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಲು ಕೊರೊನಾ ವೈರಸ್ ನ ದುರ್ಬಳಕೆ ಮಾಡುತ್ತಿದ್ದು, ಹಿಂದೂ ರಾಷ್ಟ್ರವಾದಿ ಸರ್ಕಾರವು ಬಳಸಿರುವ ಕಾರ್ಯ ತಂತ್ರ ಕೊರೊನಾದ ಹೆಸರಿನಲ್ಲಿ ಏನೋ ಮಾಡಲು ಹೊರಟಿದೆ ಎಂಬುದನ್ನು ಸೂಚಿಸುತ್ತಿದ್ದ, ವಿಶ್ವವು ಇದರತ್ತ ಗಮನ ಹರಿಸಬೇಕಿದೆ ಎಂದು ಆಕೆ ಹೇಳಿದ್ದಾರೆ. ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ನರಮೇಧ ಹತ್ತಿರವಾಗುತ್ತಿರುವಂತೆ ಕಂಡಿದೆ ಎಂದು ಅರುಂಧತಿ ರಾಯ್ ಅಭಿಪ್ರಾಯ ಹೊರಹಾಕಿದ್ದಾರೆ.

ಕೊರೊನಾ ಭಾರತದ ಬಗ್ಗೆ ನಮಗೆ ತಿಳಿದಿರುವ ವಿಷಯಗಳನ್ನು ಬಹಿರಂಗಗೊಳಿಸಿದೆ ಎಂದಿದ್ದಾರೆ ಈಕೆ. ಕೊರೊನಾ ಹೆಸರಿನಲ್ಲಿ ಯುವ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತದೆ, ವಕೀಲರು, ಹಿರಿಯ ಮಾದ್ಯಮ ಸಂಪಾದಕರು,ಸಾಮಾಜಿಕ ಹೋರಾಟಗಾರರ ವಿರುದ್ಧ ಸರ್ಕಾರವು ಸಮರ ಮಾಡುತ್ತಿದ್ದು, ಕೆಲವರನ್ನು ಜೈಲಿಗೆ ಅಟ್ಟಲಾಗಿದೆಯೆಂದೂ ಆರೋಪ ಮಾಡಿದ್ದಾರೆ. ಅರುಂಧತಿ ರಾಯ್ ಸ್ಪಷ್ಟವಾಗಿ ಭಾರತ ಕೊರೊನಾ ಹೆಸರಿನಲ್ಲಿ ಧರ್ಮವೊಂದನ್ನು ಗುರಿಯಾಗಿಸಿದೆ ಎನ್ನುವಂತೆ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here