ನಿನ್ನೆ ಮಧ್ಯೆ ರಾತ್ರಿಯಿಂದ ಇಡೀ ದೇಶ ಲಾಕ್ ಡೌನ್ ಆಗಿದೆ. ಈ ಹಿನ್ನಲೆಯಲ್ಲಿ ಜನ ಜೀವನ ಕೂಡಾ ಸ್ತಬ್ಧವಾಗಿದೆ. ಅದರಲ್ಲೂ ವಿಶೇಷವಾಗಿ ಈ ಪರಿಸ್ಥಿತಿಯ ಪರಿಣಾಮವಾಗಿ ಭಿಕ್ಷುಕರು ಮತ್ತು ನಿರ್ಗತಿಕರ ಜೀವನ ದುಸ್ತರವಾಗಿದೆ. ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವ ದಾರಿಗಳೆಲ್ಲಾ ಮುಚ್ಚಿ ಹೋಗಿದೆ. ಈ ಸಂದರ್ಭದಲ್ಲಿ ಮಾನವೀಯತೆ ಬಿಟ್ಟು ಅವರಿಗೆ ಅಗತ್ಯವಾದ ಆಹಾರವನ್ನು ಒದಗಿಸಲು ಬೇರೆ ಮಾರ್ಗಗಳು ಇಲ್ಲ ಎನ್ನುವಂತಿದೆ. ಈ ಪರಿಸ್ಥಿತಿಯ ಅವಗಾಹನೆ ಮಾಡಿಕೊಂಡ ದೆಹಲಿಯ ಕೇಜ್ರಿವಾಲ್ ಸರ್ಕಾರ ಒಂದು ಮಹತ್ವದ ನಿರ್ಣಯವನ್ನು ಮಾಡಿ, ಅದನ್ನು ಕಾರ್ಯಾಚರಣೆಗೆ ತಂದಿದೆ.

ದೆಹಲಿಯಲ್ಲಿನ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಇರುವ ರೇ‌ನ್ ಬಸೇರ ಎಂಬಲ್ಲಿ ದೆಹಲಿ ಸರ್ಕಾರವು ಉಚಿತ ಊಟವನ್ನು ನೀಡುತ್ತಿದೆ. 21ದಿನಗಳ ಈ ಲಾಕ್ ಡೌನ್ ಸಮಯದಲ್ಲಿ ನಗರದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ಮಾಧ್ಯಮಗೋಷ್ಠಿಯಲ್ಲಿ ಭರವಸೆಯನ್ನು ಕೂಡಾ ನೀಡುವ ಮೂಲಕ ದೆಹಲಿಯಲ್ಲಿನ ಭಿಕ್ಷುಕರು, ನಿರ್ಗತಿಕರು ಹಾಗೂ ಅಸಹಾಯಕರ ನೆರವಿಗೆ ಅಲ್ಲಿನ ಸರ್ಕಾರ ಮುಂದಾಗಿದೆ.

ದೇಶದಲ್ಲಿ ಹಲವೆಡೆ ಇಂತಹ ಅಸಹಾಯಕರ ಪರಿಸ್ಥಿತಿ ಕೂಡಾ ಇದಕ್ಕಿಂತ ಹೊರತಾಗಿಲ್ಲ. ಎಲ್ಲೆಡೆ ಕೂಡಾ ಇಂತಹ ಒಂದು ಭದ್ರತೆಯನ್ನು ‌ನೀಡಬೇಕಾದ ಅಗತ್ಯವಿದೆ. ಇಪ್ಪತ್ತೊಂದು ದಿನಗಳ ಕಾಲದ ಲಾಕ್ ಡೌನ್ ನ ಈ ಅವಧಿ ನಿರ್ಗತಿಕರು ಹಾಗೂ ಅಸಹಾಯಕರ ಪಾಲಿಗೆ ಸಂಕಷ್ಟದ ಪರಿಸ್ಥಿತಿಯನ್ನು ತಂದೊಡ್ಡಿದ್ದು, ದೇಶದ ಉಳಿದೆಡೆ ಇರುವ ಇಂತಹವರ ಆಹಾರದ ಸಮಸ್ಯೆ ಒಂದು ದಾರಿಯಾಗಬೇಕಾದ ಅನಿವಾರ್ಯತೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here