ಭಾವನೆಗಳನ್ನು ಮಿಡಿಯುವ, ಮಿಡಿಸುವ ಮೂಲಕ ಜನರ ಮೆಚ್ಚುಗೆ ಗಳಿಸಿ ಮುನ್ನಡೆಯುತ್ತ , ಟಿ.ಆರ್‌.ಪಿ. ಯಲ್ಲಿ ಹೊಸ ದಾಖಲೆ ಬರೆದು, ಕಿರುತೆರೆಯಲ್ಲಿ ಒಂದು ಸಂಚಲನ ಮೂಡಿಸಿ, ಧಾರಾವಾಹಿ ಹೀಗೂ ಇರುತ್ತಾ? ಸಿನಿಮಾಕ್ಕಿಂತ ಯಾವುದರಲ್ಲಿ ಕಡಿಮೆಯಿದೆ ಎನ್ನುವಂತೆ ಜನ ಮನ್ನಣೆ ಪಡೆದು ಮುನ್ನುಗುತ್ತಿರುವ , ಮನೆ ಮನೆಗಳಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರನ್ನು ರಂಜಿಸುತ್ತಿರುವ, ಮಹಿಳೆಯರ ಹಾಗೂ ಪುರುಷರ ಅಚ್ಚುಮೆಚ್ಚಿನ ಧಾರಾವಾಹಿ ಜೊತೆ ಜೊತೆಯಲಿ ದಿನದಿಂದ ದಿನಕ್ಕೆ ಜನರನ್ನು ತನ್ನತ್ತ ಸೆಳೆಯುತ್ತಾ ಸಾಗಿದೆ. ಧಾರಾವಾಹಿಯ ಕಥೆ ಮನಗೆಲ್ಲುವಂತೆ ಇದ್ದು ಸದ್ಯ ಕಥಾ ನಾಯಕ ಆರ್ಯವರ್ಧನ್ ಹಾಗೂ ನಾಯಕಿ ಅನು ಇಬ್ಬರಿಗೂ ತಮ್ಮ ಮನಸಿನ ಮಿಡಿತ ಅರ್ಥವಾಗಿದೆ. ಆದರೆ ಅದಕ್ಕೊಂದು ಸ್ಪಷ್ಟ ರೂಪ ನೀಡಲು ತೊಳಲಾಡುವ ಪರಿಸ್ಥಿತಿಯನ್ನು ತಲುಪಿದ್ದಾರೆ.

ಮನಸ್ಸಿನಲ್ಲಿ ಪ್ರೀತಿ ಇದ್ದರೂ ಅನು ತಾಯಿಗೆ ‌ಕೊಟ್ಟ ಮಾತಿಗೆ ಬದ್ಧನಾಗಿ ಅನುವನ್ನು ಮದುವೆಗೆ ಒಪ್ಪಿಸಿದ ಆರ್ಯವರ್ಧನ್ ಈಗ ತಾನೇ ಮುಂದು ನಿಂತು ಅನು ಮದುವೆ ತಯಾರಿಗಾಗಿ ಬಂದಿರುವುದು ಗಮನಾರ್ಹವಾಗಿದೆ. ಆಗರ್ಭ ಶ್ರೀಮಂತ, ಸಾವಿರಾರು ಕೋಟಿ ಆಸ್ತಿಯ ಒಡೆಯ ಒಬ್ಬ ಸಾಮಾನ್ಯನಂತೆ ಹೆಗಲ ಮೇಲೆ, ಕೈಯಲ್ಲಿ ಮದುವೆ ಸಿದ್ಧತೆಗೆ ಸಾಮಗ್ರಿಗಳನ್ನು ಹಿಡಿದು ಅನು ಮನೆ ಬಾಗಿಲಿಗೆ ಬಂದು ನಿಂತಿರುವ ಪ್ರೋಮೋ ತುಂಬಾ ಸೊಗಸಾಗಿದ್ದು, ನೋಡುಗನ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆದಿದೆ.

ಮನಸ್ಸಿನಲ್ಲಿ ಆರ್ಯವರ್ಧನ್ ಇದ್ದರೂ ಬೇರೆಯವರನ್ನು ಮದುವೆಯಾಗಲು ಪರಿಸ್ಥಿತಿ ಗಳ ಮುಂದೆ ತಲೆ ಬಾಗಿಸಿದ ಅನು, ಮನಸ್ಸಿನಲ್ಲಿರುವವಳ ಮದುವೆ ಮಾಡಿಸಲು ತಾನೇ ಮುಂದೆ ನಿಂತ ಆರ್ಯವರ್ಧನ್ ಹೀಗೆ ಧಾರಾವಾಹಿ ಒಂದು ರೋಚಕ ಘಟ್ಟವನ್ನು ತಲುಪಿದ್ದು, ಅನು ಮದುವೆ ಬೇರೆಯವರೊಡನೆ ನಡೆದು ಬಿಡುವುದೇ? ಎನ್ನುವ ಆತಂಕ ಹಲವರಲ್ಲಿ ಮೂಡಿದೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿ ಯು ಇತರೆ ಡೈಲಿ ಸೋಪ್ ಗಳ ಹಾಗೆ ಮಂದಗತಿಯಲ್ಲಿ ಸಾಗದೆ, ಬೋರ್ ಹೊಡೆಸದೆ ಸಾಗುತ್ತಿರುವ ವೇಗ ನಿಜಕ್ಕೂ ನೋಡುಗನ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಸದ್ಯಕ್ಕೆ ಅನು ಮತ್ತು ಆರ್ಯವರ್ಧನ್ ಒಂದಾಗುವರೋ? ಇಲ್ಲವೋ? ಅದಕ್ಕಾಗಿ ಧಾರಾವಾಹಿ ನೋಡಲೇಬೇಕಾಗಿದೆ.

Image credit :- zee kannada

Jothe Jotheyali | 06.11.2019 | 8.30 PM | On Zee Kannada

ಮನಸ್ಸಿಲ್ಲದ ಮದುವೆ ಮಾತು ಕಥೆಗೆ,‌ ಗಟ್ಟಿ ಮನಸ್ಸು ಮಾಡಿ ಬಂದ ಆರ್ಯವರ್ಧನ್!#ZeeKannada#JotheJotheyaliಇಂದು ರಾತ್ರಿ 8.30ಕ್ಕೆ.

Zee Kannada यांनी वर पोस्ट केले मंगळवार, ५ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here