ಮಾಜಿ ಸಚಿವರು ಹಾಗೂ ಹಾಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಮಾನ್ಯ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಡಿಸಿಎಂ ವಿರುದ್ಧ ಗರಂ ಆಗಿದ್ದಾರೆ. ಅವರು ಮಾತನಾಡುತ್ತಾ ನಾವು ಏನಾದರೂ ಮಾಡಕ್ಕೆ ಹೋದರೆ ಅವನ್ಯಾರೋ ಡಿಸಿಎಂ ಬಾಯಿಗೆ ಬಂದ ಹಾಗೇ ಮಾತನಾಡ್ತಾನೆ ಎಂದು ಅವರು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಇಂದು ನಗರದಲ್ಲಿ ಮಾದ್ಯಮಗಳ ಮುಂದೆ ಮಾತನಾಡುವ ಸಂದರ್ಭದಲ್ಲಿ ಹೀಗೆ ಡಿಸಿಎಂ ಅವರ ವಿರುದ್ಧ ಅವರ ಕೋಪವನ್ನು ಹೊರ ಹಾಕಿದ್ದಾರೆ.

ಲಾಕ್‍ಡೌನ್ ಮುಗಿದ ನಂತರ, ರಾಜ್ಯದಲ್ಲಿ ಸೋಂಕಿನ ಪ್ರಮಾಣವು ಹೆಚ್ಚಿದ್ದು ಈ ಸಂದರ್ಭದಲ್ಲಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಎಲ್ಲವನ್ನೂ ನಾವು ಸರ್ಕಾರಕ್ಕೆ ಬಿಟ್ಟಿದ್ದೇವೆ. ಅವರೇ ಏನು ಬೇಕಾದರೂ ತೀರ್ಮಾನವನ್ನು ಮಾಡಲಿ ಎಂದು ತಮ್ಮ ಸಿಟ್ಟು ಮತ್ತು ಅಸಮಾಧಾನ ಹೊರಹಾಕಿದ್ದಾರೆ ಡಿ.ಕೆ.ಶಿವಕುಮಾರ್ ಅವರು. ಇದೇ ಸಂದರ್ಭದಲ್ಲಿ ಅವರು ಲಾಕ್‍ಡೌನ್ ವಿಸ್ತರಣೆಯ ವಿಚಾರವಾಗಿ ಬೆಂಗಳೂರು ನಗರ ಶಾಸಕರೇ ಅಭಿಪ್ರಾಯ ತಿಳಿಸುತ್ತಾರೆ ಎನ್ನುತ್ತಾ ನಾವು ನಮ್ಮ ಜನರ ಸಂರಕ್ಷಣೆಗೆ ಏನಾದರೂ ಮಾಡಲು ಮುಂದಾದರೆ
ಅವನ್ಯಾರೋ ಡಿಸಿಎಂ ಬಾಯಿಗೆ ಬಂದ ಹಾಗೇ ಮಾತನಾಡ್ತಾರೆ ಎಂದಿದ್ದಾರೆ.

ಆತ ಹೂ ಇಸ್ ಡಿ.ಕೆ.ಶಿವಕುಮಾರ್ ಅಂತ ಕೇಳುತ್ತಾರೆ ಎಂದು ಕೋಪವನ್ನು ಹೊರ ಹಾಕಿದ್ದಾರೆ. ರಾಮನಗರದ ವಿಷಯವಾಗಿ ಮಾತನಾಡಿದ ಅವರು ಅಲ್ಲಿನ ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿ ಹಾಗೂ ಸಂಸದರ ಜೊತೆಗೆ ಚರ್ಚೆ ನಡೆಸಿಯೇ ನಾವು ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದೆವು ಆದರೆ ಡಿಸಿಎಂ ಅವರಿಗೆ ಈ ವಿಚಾರವಾಗಿ ಸರಿಯಾದ ಮಾಹಿತಿಯನ್ನು ಪಡೆಯದೇ ತಮಗೆ ತಿಳಿದಂತೆ ಮಾತನಾಡುತ್ತಾರೆ ಎಂದು ತಮ್ಮ ಸಿಟ್ಟನ್ನು ಹೊರಹಾಕುತ್ತಾ, ಇಂದಿನ ಸಭೆಗೆ ನಮ್ಮ ಶಾಸಕರನ್ನು ಕಳುಹಿಸಿದ್ದು, ಅವರಿಗೆ ತಮ್ಮ ಕ್ಷೇತ್ರದ ಪರಿಸ್ಥಿತಿ ತಿಳಿಸುವಂತೆ ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here