ರಾಜ್ಯದ ಡಿಸಿಎಂ‌ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರ ಸಂಪರ್ಕಕ್ಕೆ ಬಂದ ಕಾರಣದಿಂದಾಗಿ ಅವರು ಕ್ವಾರಂಟೈನ್ ಗೆ ಒಳಗಾಗಿ ದಿನಗಳನ್ನು ಕಳೆಯುತ್ತಿದ್ದರು. ಆದರೆ ಕ್ವಾರಂಟೈನ್ ಅವಧಿಯಲ್ಲೂ ಕೂಡಾ ಸದಾ ಸಕ್ರಿಯವಾಗಿದ್ದ ಅವರು ಮನೆಯಿಂದಲೇ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾ ಇದ್ದರು. ಇದೀಗ ಅವರ ಕ್ವಾರಂಟೈನ್ ಅವಧಿಯು ಮುಗಿದಿದ್ದು, ಅವರು ತಮ್ಮ ಈ ಕ್ವಾರಂಟೈನ್ ಅವಧಿಯನ್ನು ತಾನು ಹೇಗೆ ಕಳೆದೆ ಎಂಬ ಅನುಭವವನ್ನು ಆಧರಿಸಿ ನನ್ನ ಕ್ವಾರಂಟೈನ್ ಡೈರಿ ಎಂದು ಸಂಪೂರ್ಣ ವಿವರಗಳನ್ನು ಬರೆದಿದ್ದಾರೆ.

ಈ ವಿಷಯವಾಗಿ ಟ್ವೀಟ್ ಮಾಡಿರುವ ಡಿಸಿಎಂ ಅಶ್ವಥ್ ನಾರಾಯಣ ಅವರು ತಮ್ಮ ಟ್ವೀಟ್ ನಲ್ಲಿ
“ನನ್ನ ಕ್ವಾರಂಟೈನ್ ಡೈರಿ ಕ್ವಾರಂಟೈನ್ ನಲ್ಲಿ ಕೆಲವು ದಿನಗಳು ಕಳೆದಿರುವುದು ಒಂದು ಹೊಸ ರೀತಿಯ ಅನುಭವವಾಗಿತ್ತು. ಈ ಬಗ್ಗೆ ನನ್ನ ಹಲವು ವಿಚಾರಗಳನ್ನು ಒಂದು ಸಣ್ಣ ಡೈರಿ ಬರವಣಿಗೆಯ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ನೀವೂ ಕೂಡಾ ನಿಮ್ಮ ವಿಚಾರಗಳನ್ನು ತಿಳಿಸಿ!” ಎಂದು ಬರೆದುಕೊಂಡು ತಮ್ಮ ಕ್ವಾರಂಟೈನ್ ಅನುಭವದ ಕುರಿತಾಗಿ ಎಲ್ಲರೊಂದಿಗೆ ತಮ್ಮ ಅಭಿಪ್ರಾಯ ಹಾಗೂ ಅನುಭವವನ್ನು ಹೇಳಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಡಿಸಿಎಂ ಅವರು ಅದರಲ್ಲಿ ,”ನನ್ನ ಕ್ವಾರಂಟೈನ್ ಡೈರಿ ಅನಿರೀಕ್ಷಿತವಾಗಿ ನನ್ನ ಪಾಲಿಗೆ ಬಂದ ಈ ದಿಗ್ಭಂದನ ನನಗೆ ಹಲವು ಪಾಠಗಳನ್ನು ಕಲಿಸಿದೆ. ಆದರೂ ಇಂಥ ಪ್ರಮೇಯ ಎಲ್ಲರಿಗೂ ಬರುವುದು ಬೇಡ ಎಂಬುದು ನನ್ನ ಆಶಾಭಾವನೆ. ನನ್ನ ಕ್ವಾರಂಟನ್ ಡೈರಿ ತಮಗಿಷ್ಟವಾದರೆ ಒಂದು ಪ್ರೀತಿಯ ಪ್ರತಿಕ್ರಿಯೆ ಇರಲಿ. ಸದಾ ನಿಮ್ಮ ಸೇವೆಯಲ್ಲಿ” ಎಂದು ಬರೆದುಕೊಂಡಿದ್ದಾರೆ. ಕ್ವಾರಂಟೈನ್ ನಿಂದಾಗಿ ತಾನು ಹಲವು ಪಾಠಗಳನ್ನು ಕಲಿತಿರುವುದಾಗಿ ತಿಳಿಸಿರುವ ಅವರು ಕೆಲವು ಫೋಟೋ ಗಳನ್ನು ಕೂಡಾ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here