ಬೆಂಗಳೂರು: ಆಗಸ್ಟ್ 15 ಭಾರತವು ಸ್ವಾತಂತ್ರ್ಯ ಬಂದು ಶತಕಗಳೆ ಕಳೆದಿದೆ, ಬ್ರಿಟಿಷರ ಆಡಳಿತದಿಂದ ಮುಕ್ತಿಗೊಂಡು ಇಂದಿಗೆ 76 ವರ್ಷ ಕಳೆದಿದೆ. ಇಂದು ನಾವು ರಾಷ್ಟಕ್ಕೆ ತ್ಯಾಗ ಬಲಿದಾನವನ್ನು ನೀಡಿರುವ ಮಹಾನರನ್ನು ಸ್ಮರಿಸಿಕೊಳ್ಳುವ ದಿನವಾಗಿದೆ.
ಭಾರತಕ್ಕೆ ಅತಿ ಮಹತ್ವದ ದಿನ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ. 76ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ಭಾರತ ಸಜ್ಜಾಗಿದೆ. ಶಾಲಾ-ಕಾಲೇಜು ಸೇರಿದಂತೆ ಸರ್ಕಾರಿ-ಖಾಸಗಿ ಕಚೇರಿಗಳಲ್ಲಿ ಸ್ವತಂತ್ರ ದಿನವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಬ್ರಿಟಿಷರ ಆಳ್ವಿಕೆಯಿಂದ ಭಾರತ ಮುಕ್ತಗೊಂಡು ಸ್ವತಂತ್ರ ಹೊಂದಿದ ದಿನವಾಗಿದೆ. 1947 ಆಗಸ್ಟ್ 14 ರ ಮಧ್ಯರಾತ್ರಿ ನಮಗೆ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ದೊರೆಯಿತು. 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಯಿತು.
ಇಂದು ನಾವು ಕೇಸರಿ-ಬಿಳಿ-ಹಸಿರು ಬಣ್ಣವುಳ್ಳ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ವೇದಿಕೆ ಕಾರ್ಯಕ್ರಮದಲ್ಲಿ ನೆರೆದಿದ್ದೇವೆ. ಈ ದಿನ ನಾವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ಸ್ಮರಿಸಬೇಕು. ಅವರ ಆದರ್ಶಗಳನ್ನು ಅಳವಡಿಕೊಂಡು ದೇಶಪ್ರೇಮ ಮೆರೆಯಬೇಕು.
ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಸಮಾರಂಭ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರತಿವರ್ಷ ಭಾರತದ ಪ್ರಧಾನ ಮಂತ್ರಿ ಧ್ವಜಾರೋಹಣ ನೆರವೇರಿಸುತ್ತಾರೆ. ಕೆಂಪುಕೋಟೆ ಮೇಲೆ ಹಾರುವ ತ್ರಿವರ್ಣ ಧ್ವಜ ನಮ್ಮ ಕರ್ನಾಟಕ ರಾಜ್ಯದಲ್ಲೇ ತಯಾರಾಗುತ್ತದೆ. ಬಾಗಲಕೋಟೆ-ಹುಬ್ಬಳ್ಳಿ ಧಾರವಾಡದಲ್ಲಿ ಇದರ ತಯಾರಿ ಕಾರ್ಯ ನಡೆಯುತ್ತದೆ.
ಐತಿಹಾಸಿಕ ಹಿನ್ನೆಲೆ:
1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ 1957ರ ವರೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದವು. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಭಾಯಿ, ಮಹಾತ್ಮ ಗಾಂಧೀಜಿ, ಬಾಲಗಂಗಾಧರ್ ತಿಲಕ್, ಸುಭಾಷ್ ಚಂದ್ರಬೋಸ್, ಲಾಲಾ ಲಜಪತ್ ರಾಯ್, ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾನ್ ನಾಯಕರು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರು. ಮಹಾತ್ಮ ಗಾಂಧೀಜಿ ಅವರು ಮಾಡು ಇಲ್ಲವೆ ಮಡಿ ಎಂದು ಕರೆಕೊಟ್ಟು ಹೋರಾಡಿದರು. ಸ್ವಾತಂತ್ರ್ಯದ ಜ್ವಾಲೆ ಇಡೀ ದೇಶದ ತುಂಬೆಲ್ಲ ಹರಡಿ ಸಾವಿರಾರು ಮಂದಿ ಹೋರಾಟದಲ್ಲಿ ಪಾಲ್ಗೊಂಡರು. ಅನೇಕರು ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಕೊನೆಯದಾಗಿ 1947 ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು.
ಆಗಸ್ಟ್ 14ರ ರಾತ್ರೋರಾತ್ರಿ ಬ್ರಟಿಷರ ಆಳ್ವಿಕೆ ಕೊನೆಯಾಯಿತು. ಮಹಾನ್ ನಾಯಕರೂ ಸೇರಿದಂತೆ ತೆರೆಮರೆಯ ಸಾವಿರಾರು ಜನರ ತ್ಯಾಗ-ಬಲಿದಾನದ ಪರಿಣಾಮವಾಗಿ ನಾವಿಂದು ಸ್ವತಂತ್ರರಾಗಿ, ಯಾರದೇ ಅಧಿಕಾರಕ್ಕೆ ಒಳಗಾಗದೇ ಬದುಕುತ್ತಿದ್ದೇವೆ. ಈ 76 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯರು ಮಹತ್ತರ ಸಾಧನೆ ಮಾಡುತ್ತಾ ಮುನ್ನುಗಿದ್ದಾರೆ. ಭವಿಷ್ಯದುದ್ದಕ್ಕೂ ನಾವು ಪ್ರತಿಯೊಬ್ಬರ ಸ್ವಾತಂತ್ರ್ಯ-ಸಮಾನತೆಗೆ ಆದ್ಯತೆ ನೀಡಬೇಕು. ಬ್ರಿಟಿಷರಿಂದ ಸ್ವಾತಂತ್ರ್ಯವೇನೋ ಸಿಕ್ಕಿತು, ಆದರೆ ಭಾರತದಲ್ಲಿ ದೌರ್ಜನ್ಯ-ಕಿರುಕುಳ-ಹಿಂಸಾಚಾರ- ಕೋಮುವಾದ-ಭ್ರಷ್ಟಾಚಾರಗಳ ಅನೇಕ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿದೆ. ಇದನ್ನು ನಿಯಂತ್ರಿಸಲು ನಾವು ಪಣತೊಡಬೇಕು. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಜೈ ಹಿಂದ್, ಜೈ ಭಾರತ ಮಾತೆ..
ವರದಿಗಾರ: ಪ್ರವೀಣ ಬೆಳಗಾವಿ
Disclaimer: This Story is auto-aggregated by a Syndicated Feed and has not been Created or Edited By City Big News Staff.