ಆಸ್ಟ್ರೇಲಿಯಾ ದಲ್ಲಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚಿನಿಂದ ಅದೆಷ್ಟೋ ಅಮಾಯಕ ಮೂಗ ಜೀವಿಗಳು ಬಲಿಯಾಗಿ ಹೋಗಿವೆ‌. ಅದೆಷ್ಟೋ ಜನ ಇರವ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆಸ್ಟ್ರೇಲಿಯಾ ದ ಪರಿಸ್ಥಿತಿಯನ್ನು ಕಂಡು ಮರುಗಿರುವ ವಿಶ್ವ ರಾಷ್ಟ್ರಗಳು ಆಸ್ಟ್ರೇಲಿಯಾಕ್ಕೆ ಅಗತ್ಯ ನೆರವನ್ನು ನೀಡಲು ಮುಂದಾಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಿಂದ ಕಂಗೆಟ್ಟ ಮಂದಿಯ ಹಸಿವನ್ನು ನೀಗಿಸಲು ಭಾರತೀಯ ಮೂಲದ ಸಿಖ್ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಅಲ್ಲಿ ಧಾವಿಸಿದ್ದಾರೆ.

ಸುಖ್ವಿಂದರ್ ಕೌರ್ ಹೆಸರಿನ ಮಹಿಳೆ ಸುಮಾರು ಒಂದು ದಶಕದಿಂದ ಆಸ್ಟ್ರೇಲಿಯಾದಲ್ಲಿ ನೆಲೆ ಕಂಡುಕೊಂಡವರು. ಅವರ ತಂಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸುಖ್ವಿಂದರ್ ಕೌರ್ ಅವರು ಭಾರತಕ್ಕೆ ಬರಬೇಕಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಡ್ಗಿಚ್ಚು, ಅದರಿಂದ ಜನ ಪಡುತ್ತಿರುವ ನೋವನ್ನು ಕಂಡು, ತನ್ನ ಕೈಲಾದ ನೆರವನ್ನು ನೀಡಲು ಕೌರ್ ತಮ್ಮ ಭಾರತಕ್ಕೆ ಬರುವ ಯೋಜನೆ ರದ್ದು ಮಾಡಿಕೊಂಡಿದ್ದಾರೆ. ದಿನವೊಂದಕ್ಕೆ ಸಾವಿರಾರು ಜನ‌ ನಿರಾಶ್ರಿತರಿಗೆ ಸುಖ್ವಿಂದರ್ ಅವರು ಅಡುಗೆ ಮಾಡುತ್ತಿದ್ದಾರೆ.

ತಯಾರಿಸಿದ ಅಡುಗೆಯನ್ನು ಆಸ್ಟ್ರೇಲಿಯಾದಲ್ಲಿನ ಸಿಖ್ ಸಮುದಾಯದ ಸ್ವಯಂ ಸೇವಕರ ಜೊತೆ ಸೇರಿ
ತಮ್ಮ ಸ್ವಂತ ವಾಹನದ ಮೂಲಕ ಹಗಲಿಂದ ರಾತ್ರಿಯವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ವಿಕ್ಟೋರಿಯಾದ ಪ್ರೀಮಿಯರ್ ಡ್ಯಾನ್ ಆ್ಯಂಡ್ರೂಸ್ ಅವರು ಸುಖ್ವಿಂದರ್ ಕೌರ್ ಮತ್ತು ಸಿಖ್ ಸ್ವಯಂ ಸೇವಕರು ಮಾಡುತ್ತಿರುವ ಸಹಾಯಕ್ಕೆ ಟ್ವಿಟರ್ ನಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಸುಖ್ವಿಂದರ್ ಕೌರ್ ಅವರ ಈ ಸೇವೆ ನಿಜಕ್ಕೂ ಭಾರತೀಯರೆಲ್ಲರೂ ಮೆಚ್ಚುವಂತದ್ದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here