ಆಸ್ಟ್ರೇಲಿಯಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿದ್ದ ಕಾಡ್ಗಿಚ್ಚಿನ ಪರಿಣಾಮ, ಅಲ್ಲಿನ ಪ್ರಾಣಿಗಳ ದಯನೀಯ ಪರಿಸ್ಥಿತಿ ನೋಡಿ ಜಗತ್ತಿನಾದ್ಯಂತ ಜನರು ಭಾವುಕರಾಗಿದ್ದು ಹೌದು. ಲಕ್ಷಾಂತರ ಪ್ರಾಣಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಆಹುತಿಯಾಗಿ ಹೋಗಿವೆ. ಈ ಅನಾಹುತದ ಪರಿಣಾಮವೇ ಇನ್ನೂ ಮಾಸಿಲ್ಲ ಎನ್ನುವಾಗಲೇ ಆಸ್ಟ್ರೇಲಿಯಾದ ಕೆಲವು ನಗರಗಳಲ್ಲಿ ಪ್ರವಾಹ, ಆಲಿಕಲ್ಲು ಮಳೆ ಮತ್ತು ಧೂಳಿನ ಚಂಡ ಮಾರುತಗಳು ಉಂಟಾಗಿದ್ದು, ಪ್ರಕೃತಿಯಲ್ಲಿ ನಡೆಯುತ್ತಿರುವ ಈ ವೈಪರೀತ್ಯಗಳನ್ನು ನೋಡಿದವರು ಕಂಗಲಾಗಿದ್ದಾರೆ. ಹಿಂದಿಂದೆ ನಡೆಯುತ್ತಿರುವ ಈ ಅನಾಹುತಗಳನ್ನು ನೋಡಿ ಜನ ಕಂಗೆಟ್ಟಿದ್ದಾರೆ.

ಈ ವಿಷಯವನ್ನು ಅನೇಕರು ತಮ್ಮ ಟ್ವಿಟರ್ ಗಳಲ್ಲಿ ಫೋಟೋ ಮತ್ತು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದ ಕ್ಯಾನ್ ಬೆರಾದಲ್ಲಿ ಆಲಿಕಲ್ಲು ಮಳೆಯುಂಟಾಗಿದೆ. ಭಾನುವಾರ ಮೆಲ್ಬೋರ್ನ್ ನಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕಾಡ್ಗಿಚ್ಚು ನಿಂದ ಹಾನಿಗೆ ಒಳಗಾಗಿದ್ದ ನ್ಯೂ ಸೌತ್ ವೇಲ್ಸ್ ನ ಬ್ರಿಸ್ಬೇನ್ ಮತ್ತು ಗೋಲ್ಡ್ ಕೋಸ್ಟ್ ನಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿ ಕೆಂಪು ಧೂಳಿನ ಮೋಡ ಕವಿದಿದ್ದು, ಇದು ವೇಗವಾಗಿ ಸಾಗುತ್ತಾ ಬರುತ್ತಿದೆ ಎನ್ನಲಾಗಿದೆ.

ಹೀಗೆ ಕಾಡ್ಗಿಚ್ಚು, ಆಲಿಕಲ್ಲು ಮಳೆ, ಪ್ರವಾಹ, ಧೂಳಿನ ಚಂಡಮಾರುತಗಳಂತಹ ಪ್ರಕೃತಿ ವೈಪರೀತ್ಯಗಳನ್ನು ನೋಡಿದ ಜನರು ಕಂಗಾಲಾಗಿದ್ದಾರೆ. ಮಳೆಯಿಂದ ಕೆಲವೆಡೆ ವಾತಾವರಣದಲ್ಲಿ ಉಷ್ಣತೆ ಕಡಿಮೆ ಏನೋ ಆಗಿದೆ. ಆದರೆ ಹೀಗೆ ಪ್ರಕೃತಿಯಲ್ಲಿ ಕಂಡು ಬರುತ್ತಿರುವ ಈ ವೈಪರೀತ್ಯಗಳು ಮಾತ್ರ ಮುಂದೆ ಮತ್ತೇನಾದರೂ ಅನಾಹುತ ತಂದೊಡ್ಡಲಿದೆಯಾ ಎಂಬ ಅನುಮಾನಗಳು ಕೂಡಾ ಹಲವರಲ್ಲಿ ಮೂಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here