ಕಳೆದ ಎರಡು ವಾರಗಳಿಂದ ನಮ್ಮ ರಾಜ್ಯದ ಜನತೆ ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಳೆಯ ಅಬ್ಬರ, ಪ್ರವಾಹ , ಭೂ ಕುಸಿತ ರಾಜ್ಯದ ಜನರನ್ನು ನೋವಿನಲ್ಲಿ ಕಾಲ ಕಳೆಯುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಪ್ರವಾಹ ಉಂಟಾಗಿದ್ದು ಅಲ್ಲಿನ ಜನತೆಗೆ ರಾಜ್ಯದ ಜನತೆ ಸಹಾಯ ಮಾಡುತ್ತಿದ್ದಾರೆ.  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಚೇರಿ ಶ್ರಮಿಕ ಕಳೆದ ಮೂರು ದಿನಗಳಿಂದ ತಾಲ್ಲೂಕಿನ ಪ್ರವಾಹ ಸಂತ್ರಸ್ತರ ಪಾಲನೆಗಾಗಿ 24×7 ಗಂಟೆ ಕಾರ್ಯ ನಿರ್ವಹಿಸಿ ದಾನಿಗಳಿಂದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ವಿವಿಧೆಡೆಯಲ್ಲಿರುವ ಪಾಲನಾ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದೆ….

ಸೋಮವಾರ ಮಧ್ಯಾಹ್ನ ಶಾಶಕರ  ಕಚೇರಿಗೆ 75ರ ಹರೆಯದ ವಯೋವೃದ್ದರು ಖಾಕಿ ಬಟ್ಟೆ ಧರಿಸಿಕೊಂಡು ಕಚೇರಿ ಸಿಬ್ಬಂದಿಯಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡುವ ಸಂಬಂಧ ಚರ್ಚಿಸಿ ಕೊನೆಗೆ ತಾನು ನೀಡುವ ದೇಣಿಗೆ ಸಂತ್ರಸ್ತರಿಗೆ ಉಪಯೋಗವಾಗಬೇಕು ತನ್ನ ತಾಲ್ಲೂಕಿಗೆ ಪ್ರಯೋಜನವಾಗಲೆಂದು ನೈಜ ಕಾಳಜಿಯಿಂದ ದೇಣಿಗೆ ನೀಡಲು ಮುಂದಾದರು…..ಮೊಬಲಗಿನ ವಿವರ ಕೇಳಿದಾಗ ಆಶ್ಚರ್ಯವಾಗುವ ಸರದಿ ಶಾಸಕರ ಕಾರ್ಯಕರ್ತರ ದ್ದಾಗಿತ್ತು.

ತೇವ ಭರಿತ ಕಣ್ಣುಗಳಿಂದ ಸಂತೋಷದಿಂದ ನಿಡ್ಲೆ ಗ್ರಾಮದ ಮೇರ್ಲ ಮನೆ ನಿವಾಸಿಯ ಹೊನ್ನಪ್ಪ ಗೌಡ’ರು ನೀಡಿದ ಒಂದು ಲಕ್ಷ ರೂಪಾಯಿ ಸ್ವೀಕರಿಸಿದರು… ನಿಜಕ್ಕೂ ನಿರಾಶ್ರಿತರ ನೋವು ಇಂಥವರಿಗೆ ಬೇಗ ಅರ್ಥ ಆಗುತ್ತದೆ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here