ಪೋಲಿಸರ ಗುಂಡೇಟಿಗೆ ಗಾಯಗೊಂಡಿರುವ ರೌಡಿ ಶೀಟರ್ ನ ಒಬ್ಬ , ಏಟು ತಿಂದ ಮೇಲೆ ಪೋಲಿಸರಿಗೆ ಶರಣಾಗಿರುವ ಘಟನೆಯೊಂದು ವರದಿಯಾಗಿದೆ. ನಿಜಕ್ಕೂ ಸಿನಿಮಾದ ಘಟನೆಯಂತೆ ಈ ಸಂಘಟನೆ ನಡೆದಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ಅವಿನಾಶ್ ಅವರು ಇಬ್ಬರು ಪೇದೆಗಳೊಂದಿಗೆ ರೌಡಿ ಶೀಟರ್ ಒಬ್ಬನನ್ನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಬೊಮ್ಮಶೆಟ್ಟಿಹಳ್ಳಿ ನಿವಾಸಿಯಾದ ಅರುಣ್ ಕುಮಾರ್ ಅಲಿಯಾಸ್ ಲಾಂಗ್ ಅರುಣ್ ನನ್ನು ಬಂಧಿಸಲು ಪೋಲಿಸರು ಹೋದಾಗ ನಡೆದ ಘಟನೆ ಇದಾಗಿದೆ.

ಲಾಂಗ್ ಅರುಣ್ , ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಕೊಲೆ ಕೇಸಿನಲ್ಲಿ ಆರೋಪಿಯಾಗಿದ್ದಾನೆ. ಕಳೆದ ಚುನಾವಣೆ ಸಂದರ್ಭದಲ್ಲಿ ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆ ಬಾರ್ ಬಳಿ ನಡೆಯಿತ್ತೆನ್ನಲಾದ ಜೆಡಿಎಸ್ ಕಾರ್ಯಕರ್ತನ ಕೊಲೆಗೆ ಸಂಬಂಧಿಸಿದಂತೆ ಲಾಂಗ್ ಅರುಣ್ ಕುಮಾರ್ ಆರೋಪಿಯಾಗಿದ್ದು, ಪೋಲಿಸರು ಆತನ ಹುಡುಕಾಟದಲ್ಲಿ ಇದ್ದರೆನ್ನಲಾಗಿದೆ. ಲಾಂಗ್ ಅರುಣ್ ತಾಲ್ಲೂಕಿನ ಕುರೂಡಿ ಕ್ರಾಸ್ ಬಳಿ ಇರುವುದನ್ನು ತಿಳಿದುಕೊಂಡ ಪಿಎಸ್ಐ ಅವಿನಾಶ್ ಅವರು ಪೇದೆಗಳಾದ ಅರುಣ್ ಹಾಗೂ ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ.

ಪೋಲಿಸರು ಬರುವುದನ್ನು ಗಮನಿಸಿದ ರೌಡಿ ಶೀಟರ್ ಅರುಣ್ ತನ್ನ ಲಾಂಗ್ ನಿಂದ ಪೋಲಿಸ್ ಪೇದೆಗಳಾದ ಅರುಣ್ ಹಾಗೂ ಮಂಜುನಾಥ್ ಅವರ ಮೇಲೆ ಧಾಳಿ ಮಾಡಿ ಗಾಯಗೊಳಿಸಿದ್ದಾನೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪಿಎಸ್ಐ ಅವಿನಾಶ್ ಅವರು ರೌಡಿ ಶೀಟರ್ ನ ಕಾಲಿಗೆ ಫೈರ್ ಮಾಡಿದ್ದಾರೆ. ಅನಂತರ ಇಬ್ಬರೂ ಗಾಯಗೊಂಡ ಪೇದೆಗಳಿಗೆ ಗೌರಿಬಿದನೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ರೌಡಿ ಶೀಟರ್ ಅರುಣ್ ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆಯೆಂದು ತಿಳಿದು ಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here