ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಪ್ಯಾನ್ ಇಂಡಿಯಾ ಮೂವಿ ಅವನೇ ಶ್ರೀ ಮನ್ನಾರಾಯಣ ಟ್ರೈಲರ್ ಬಿಡುಗಡೆಯಾಗಿ,ಭರ್ಜರಿ ಸದ್ದು ಮಾಡುತ್ತಿದೆ. ಟ್ರೈಲರ್ ಸಾಕಷ್ಟು ಸದ್ದು ಮಾಡಿದ್ದು, ಸಿನಿಮಾದ ಬಗ್ಗೆ ಭರವಸೆ ಮೂಡಿಸಿರುವುದು ಮಾತ್ರವಲ್ಲದೇ, ಸಾಕಷ್ಟು ನಿರೀಕ್ಷೆಗಳನ್ನು ಕೂಡಾ ಹುಟ್ಟು ಹಾಕಿದೆ. ಸಿನಿಮಾ ಹೇಗಿರಬಹುದು? ಎಂಬ ಕುತೂಹಲ ಎಲ್ಲೆಡೆ ತುಂಬಿದೆ. ರಕ್ಷಿತ್ ಶೆಟ್ಟಿ ಹೆಸರು ಬಂದಾಗಲೆಲ್ಲಾ ಟ್ರೋಲಿಗರ ಟ್ರೋಲ್ ಗಳಿಗೆ ಗುರಿಯಾಗುವುದು ರಶ್ಮಿಕಾ ಮಂದಣ್ಣ. ಅವನೇ ಶ್ರೀಮನ್ನಾರಾಯಣ ಟ್ರೈಲರ್ ಬಿಡುಗಡೆ ನಂತರ ಈಗ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.

ರಶ್ಮಿಕಾ ಅವರು ಸದ್ಯ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಅಪ್ಡೇಟ್ ಗಳನ್ನು ಪೋಸ್ಟ್ ಮಾಡುತ್ತಿದ್ದು, ಇದನ್ನು ಗಮನಿಸಿದ ನೆಟ್ಟಿಗರು ಅವನೇ ಶ್ರೀ ಮನ್ನಾರಾಯಣ ಪೋಸ್ಟರ್ ನೋಡಿದ್ರಾ ಎಂದು ವ್ಯಂಗ್ಯ ಮಾಡಿದ್ದು, ನಿಮಗೆ ಕನ್ನಡ ಬರೋದಿಲ್ಲ ಅಲ್ವಾ ಪರವಾಗಿಲ್ಲ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ಹಿಂದಿ, ತೆಲುಗು, ತಮಿಳಿನಲ್ಲಿ ಕೂಡಾ ಇದೆ ನೋಡಿ ಉರಿದುಕೊಳ್ಳಿ ಎಂದು ಟ್ವೀಟ್ ಮಾಡುವ ಮೂಲಕ ರಶ್ಮಿಕಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡುತ್ತಾ, ಅವನೇ ಶ್ರೀ ಮನ್ನಾರಾಯಣ ಲಿಂಕ್ ಶೇರ್ ಮಾಡಿದ್ದಾರೆ.

ಇನ್ನೂ ಅನೇಕರು ರಶ್ಮಿಕಾ ಅವರು ತಮ್ಮ ಹೊಸ ತೆಲುಗು ಸಿನಿಮಾದ ಬಗ್ಗೆ ಮಾಡಿರುವ ಟ್ವೀಟ್ ಗೆ ರೀ ಟ್ವೀಟ್ ಮಾಡುತ್ತಾ ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್ ಲಿಂಕನ್ನು ಶೇರ್ ಮಾಡಿ ಹಳೆಯ ಮನಸ್ತಾಪ ಮರೆತು ಅದನ್ನು ನೋಡಿ ಎಂದು ಸಜೆಸ್ಟ್ ಮಾಡಿದ್ದಾರೆ. ಒಟ್ಟಾರೆ ರಶ್ಮಿಕಾ ಅವರ ಹೊಸ ಸಿನಿಮಾದ ಪೋಸ್ಟ್ ನ ಪ್ರತಿಕ್ರಿಯೆಗಳಲ್ಲಿ ಅವನೇ ಶ್ರೀ ಮನ್ನಾರಾಯಣ ಟ್ರೈಲರ್ ಲಿಂಕ್ ಗಳು ಕಂಡಿವೆ. ಇನ್ನು ಈ ಸಿನಿಮಾದ ಟ್ರೈಲರ್ ಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆಗಳು ದೊರಕುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here