ಇದು ಭಾರತದಲ್ಲಿ ಒಂದು ಐತಿಹಾಸಿಕ ನಿರ್ಣಯವು ಹೊರ ಬರುವ ದಿನ. ದೇಶದ ಸುಪ್ರೀಂ ಕೋರ್ಟ್ ದೇಶದಲ್ಲಿ ಅತಿ ಸೂಕ್ಷ್ಮವಾದ ವಿಚಾರವೊಂದರ ಕುರಿತಾಗಿ ಐತಿಹಾಸಿಕ ನಿರ್ಣಯವನ್ನು ಘೋಷಿಸಲು ಹೊತಟಿರುವ ದಿನ. ಅದೇ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಹಾಗೂ ಬಾಬ್ರಿ ಮಸೀದಿ ವಿವಾದವನ್ನು ಕುರಿತಾದ ವಿಚಾರ. ಇಂದು ದೇಶದ ಜನರೆಲ್ಲಾ ಅಯೋಧ್ಯೆ ತೀರ್ಪಿಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ಇನ್ನು ಈ ವಿಷಯವಾಗಿ ಈ ಮಾಜಿ ಐಪಿಎಸ್ ಅಧಿಕಾರಿ , ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಅವರು ತೀರ್ಪು ಏನೇ ಬಂದರೂ ಅದು ಭಾರತದಲ್ಲಿ ಅದರಿಂದ ಒಂದು ಹೊಸ ಅಧ್ಯಾಯ ಆರಂಭವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಣ್ಣಾಮಲೈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಯೋಧ್ಯೆ ಬಗ್ಗೆ ಏನೇ ತೀರ್ಪು ಬಂದರೂ ಅದು ಹೊಸ ಭಾರತಕ್ಕೆ ಮುನ್ನುಡಿಯಾಗಲಿದೆ ಎಂದಿದ್ದಾರೆ. ಈ ದಿನವು ಮಾವನ ಕುಲಕ್ಕೆ ಶಾಂತಿ, ಸಹನೆ ಹಾಗೂ ಗೌರವವನ್ನು ನೀಡಲಿ ಎಂದು ಅವರು ಆಶಿಸಿದ್ದಾರೆ. ನಾವು ಸ್ವತಃ ಹೇರಿದ ಗುರುತುಗಳನ್ನು ತೆಗೆದು ಹಾಗೂ ನಮ್ಮ ‘ಭಾರತೀಯ’ ಗುರುತನ್ನು ಮೊದಲು ತರುವ ದಿನ ಆಗಿರಬೇಕು” ಎಂಬುದಾಗಿ ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈ ಅವರ ಟ್ವೀಟ್ ನೋಡಿರುವ ಅವರ ಅಭಿಮಾನಿಗಳು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಲವರು, ಅಣ್ಣಾಮಲೈ ಅವರು ಹೇಳಿದ ಮಾತುಗಳು ನಿಜ ಜೀವನದ ಎಂದೂ, ನಾವು ಮೊದಲ ಭಾರತೀಯರಾಗಬೇಕು ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ಅಣ್ಣಾಮಲೈ ಅವರ ಮಾತನ್ನು ಒಪ್ಪಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇಂದು ಅಣ್ಣಾಮಲೈ ಅವರು ಹೇಳಿರುವಂತೆ ಸುಪ್ರೀಂ ಕೋರ್ಟ್ ನ ನಿರ್ಣಯ ಒಂದು ಹೊಸ ಅಧ್ಯಾಯವನ್ನು ಭಾರತದಲ್ಲಿ ತೆರೆಯಲಿದೆ ಎನ್ನುವುದು ಮಾತ್ರ ವಾಸ್ತವ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here