ಅಯೋಧ್ಯೆ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ದೇಶದಾದ್ಯಂತ ಸಂಭ್ರಮಿಸಲಾಗಿದೆ. ಶತಮಾನಗಳ ವಿವಾದಕ್ಕೊಂದು ಮಹತ್ವದ ತೀರ್ಪು ದೊರೆಯಿತೆಂದೂ, ನ್ಯಾಯ ಸಮ್ಮತವಾದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆಯೆಂದು ಇಂದು ನಾಡಿನ ಗಣ್ಯರು ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ಸಂದರ್ಶನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮಾತ್ರ ಸುಪ್ರಿಂ ಕೋರ್ಟರ ನ ಈ ತೀರ್ಪನ್ನು ತಿರಸ್ಕರಿಸಿದ್ದು, ಸುಪ್ರೀಂಕೋರ್ಟ್ ತೀರ್ಪು ಅಂತಿಮವಾದರೂ ಅದು ದೋಷರಹಿತವಲ್ಲ ಎಂದು ಅಸಾದುದ್ದೀನ್ ಒವೈಸಿ ಮಾರ್ಮಿಕವಾಗಿ ಹೇಳುತ್ತಾ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಒವೈಸಿ ಇಂದು ಸುಪ್ರೀಂ‌ ಕೋರ್ಟ್ ತೀರ್ಮಾನ ಹೊರ ಬಂದ ನಂತರ, ಸುದ್ದಿ ಮಾದ್ಯಮಗಳ ಮುಂದೆ ಮಾತನಾಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮಸೀದಿಯ ನಿರ್ಮಾಣಕ್ಕೆ ನೀಡಬೇಕೆಂದಿರುವ ಐದು ಎಕರೆ ಭೂಮಿಯ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ, 5 ಎಕರೆ ಭೂಮಿಯ ಭಿಕ್ಷೆ ಮುಸ್ಲಿಮರಿಗೆ ಬೇಕಿಲ್ಲ ಎಂದು ಕಿಡಿಕಾರುತ್ತಾ ತಮ್ಮ ಮಾತನ್ನು ಹೇಳಿದ್ದಾರೆ. ಅಲ್ಲದೆ ತಾನು ರಸ್ತೆಗಿಳಿದು ಭಿಕ್ಷೆ ಬೇಡಿದರೆ ಈ ದೇಶದಲ್ಲಿರುವ ಮುಸ್ಲಿಮರು 5 ಎಕರೆ ಭೂಮಿಯನ್ನು ಖರೀದಿಸಲು ಬೇಕಿರುವ ಅಷ್ಟು ಹಣ ನೀಡುತ್ತಾರೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಇಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಮರು ಪರಿಶೀಲನೆ ಅರ್ಜಿ ಸಲ್ಲಿಸುವ ಕುರಿತಾಗಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಅವರು ತಮ್ಮ ಪ್ರತಿಕ್ರಿಯೆ ಮೂಲಕ ಸುಪ್ರೀ ಕೋರ್ಟ್ ನೀಡಿರುವ ತೀರ್ಪು ದೋಷರಹಿತವಲ್ಲ ಎಂದೂ, ತಮಗೆ ಅದರ ಬಗ್ಗೆ ಅಸಮಾಧಾನ ಇದೆಯೆಂದು ಸ್ಪಷ್ಟವಾಗಿ ವ್ಯಕ್ತ ಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here