ಜನರ ಭಾವನೆಗಳೊಂದಿಗೆ ಮಿಳಿತವಾಗಿರುವ, ಭಾರತೀಯರ ನರ ನಾಡಿಗಳಲ್ಲಿ ಮಿಳಿತವಾಗಿರುವ ಒಂದು ಸೂಕ್ಷ್ಮ ವಿಚಾರ ಎಂದರೆ ಅದು ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದ್ದು. ಅದೆಷ್ಟೋ ವರ್ಷಗಳಿಂದ ಈ ವಿಷಯ ಇತ್ಯರ್ಥವಾಗದೆ ಹಾಗೇ ಉಳಿದಿತ್ತು. ಆದರೆ ಇಂದು ಸುಪ್ರೀಂ ತನ್ನ ಅಂತಿಮ ತೀರ್ಪು ಪ್ರಕಟಣೆ ಮಾಡಲಿದೆ ಎಂದು ದೇಶದ ಜನರು ಕಾತುರದಿಂದ ಕಾಯುತ್ತಿದ್ದರು. ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ಅವರು ನಿವೃತ್ತರಾಗಲಿದ್ದು, ಅವರೊಂದಿಗೆ ಈ ತೀರ್ಪು ಪ್ರಕಟಿಸಲಿರುವ ಪೀಠದಲ್ಲಿ ಇನ್ನು ನಾಲ್ವರು ನ್ಯಾಯಮೂರ್ತಿಗಳಿದ್ದು ಐದು ಜನ ಸೇರಿ ಒಂದು ಐತಿಹಾಸಿಕ ತೀರ್ಪು ಪ್ರಕಟಣಡ ಮಾಡಲಿದ್ದರು.

ಈಗ ಇಡೀ ವಿಶ್ವವೇ ಎದುರು ನೋಡುತ್ತಿದ್ದ ಆ ಐತಿಹಾಸಿಕ ಮಹತ್ವದ ಅಯೋಧ್ಯಾ ವಿವಾದಕ್ಕೆ ಅಂತಿಮ ತೆರೆ ಬಿದ್ದಿದೆ. ಕೋಟ್ಯಾಂತರ ಭಾರತೀಯರ ನಿರೀಕ್ಷೆಗಳಿಗೆ, ವರ್ಷಗಳ ಕಾಯುವಿಕೆಗೆ ಇಂದು ವಿರಾಮ ಸಿಕ್ಕಾಗಿದೆ. ಕೊನೆಗೂ ಐತಿಹಾಸಿಕ ತೀರ್ಪು ಇಂದು ಹೊರಬಂದಿದ್ದು, ಶತಮಾನಗಳ ಕಾಲ ವಿವಾದದಲ್ಲೇ ನಲುಗಿದ್ದ ಅಯೋಧ್ಯಾ ಇನ್ನು ಮುಂದೆ ರಾಮಲಲ್ಲಾ ಭೂಮಿಯಾಗಿ ರೂಪುಗೊಳ್ಳಲಿದೆ ಎಂಬ ಮಹತ್ವದ ನಿರ್ಣಯವನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದು ಕೋಟ್ಯಂತರ ಭಾರತೀಯರಲ್ಲಿ ಹರ್ಷ, ಸಂತಸ ಹಾಗೂ ಸಂಭ್ರಮವನ್ನು ಮೂಡಿಸಿದೆ.

ಸುಪ್ರಿಂ‌ಕೋರ್ಟ್ ತನ್ನ ತೀರ್ಮಾನದಲ್ಲಿ ಅಷ್ಟು ಮಾತ್ರವೇ ಅಲ್ಲದೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನು ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರವೇ ಯೋಜನೆ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಇದೇ ವೇಳೆ ಸೂಚನೆಗಳನ್ನು ನೀಡಿದೆ. ಇದೊಂದು ಐತಿಹಾಸಿಕ ನಿರ್ಣಯವೇ ಆಗಿದ್ದು, ಬಹುಸಂಖ್ಯಾತ ಭಾರತೀಯರು ಈ ನಿರ್ಣಯವನ್ನು ಒಮ್ಮತದಿಂ ಒಪ್ಪ ಬೇಕಿದೆ.
ಆಗಸ್ಟ್‌ನಿಂದ ಅಕ್ಬೋಬರ್‌ವರೆಗೆ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠ ಒಟ್ಟು 40 ದಿನಗಳ ಕಾಲ ವಿಚಾರಣೆ ನಡೆಸಿ ಇಂತಹ ಮಹತ್ವದ ತೀರ್ಮಾನ ನೀಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here