ನಾಳೆ ಅಂದರೆ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆಗೆ ಸಕಲ ಸಿದ್ಥತೆಗಳು ಭರದಿಂದ ನಡೆದಿವೆ. ಈಗಾಗಲೇ ಗಣ್ಯರಿಗೆ ಆಹ್ವಾನ ಪತ್ರಿಕೆಗಳು ತಲುಪಿವೆ‌. ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕೂಡಾ ಖಚಿತವಾಗಿದೆ.‌ ಆದರೆ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಾಡಳಿತವು ಪಾಲ್ಗೊಳ್ಳುವುದು ಸಂವಿಧಾನದ ಉಲ್ಲಂಘನೆ ಮಾತ್ರವೇ ಅಲ್ಲದೇ ಅದು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧದ ನಡೆ ಕೂಡಾ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಎಂ) ಹೇಳಿಕೆಯನ್ನು ನೀಡಿದೆ.‌

ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ದೇವಾಲಯದ ನಿರ್ಮಾಣವು ಅದಕ್ಕಾಗಿ ರಚಿಸಲ್ಪಡುವು ಟ್ರಸ್ಟ್ ನಿಂದ ಆಗಬೇಕೆಂದು ಹೇಳಿದೆ. ಆದ ಕಾರಣ ಈ ಭೂಮಿ ಪೂಜಾ ಸಮಾರಂಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಂತಹ ಸರ್ಕಾರದ ಉನ್ನತ ಸ್ಥಾನದಲ್ಲಿ ಇರುವ ವ್ಯಕ್ತಿಯು ಭಾಗವಹಿಸುವುದು ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ತತ್ವಕ್ಕೆ ವಿರುದ್ಧ ಎಂದು ಸಿಪಿಐ (ಎಂ) ಹೇಳಿದೆ.‌ 1992 ರ ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಅಪರಾಧ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಆದರೆ ಆ ಅಪರಾಧಿಗಳನ್ನು ಕೇಂದ್ರ ಸರ್ಕಾರ ಇದುವರೆವಿಗೂ ಕೂಡಾ ಶಿಕ್ಷೆಯನ್ನು ನೀಡಿಲ್ಲ, ಬದಲಾಗಿ ಅದನ್ನು ಧ್ವಂಸ ಮಾಡಿದವರಿಹೆ ಕಾನೂನು ಪಾವಿತ್ರ್ಯತೆ ನೀಡುವಂತೆ ಕೇಂದ್ರ ಸರ್ಕಾರವು ವರ್ತಿಸುತ್ತಿದೆ ಎಂದು ಸಿಪಿಎಂ ವಿಷಾದವನ್ನು ವ್ಯಕ್ತಪಡಿಸಿದೆ. ಒಂದೆಡೆ ಭರದಿಂದ ಭೂಮಿ ಪೂಜಾ ಕಾರ್ಯಕ್ರಮ ನಡೆಯುವಾಗಲೇ ಸಿಪಿಎಂ ನೀಡಿರುವ ಹೇಳಿಕೆ ಎಲ್ಲರ ಗಮನವನ್ನು ಸೆಳೆದಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here