ರಾಮ ಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಮಸೀದಿ ವಿವಾದದ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯ ತೀರ್ಪು ಪ್ರಕಟಣೆ ಮಾಡುವ ಹಿನ್ನೆಲೆಯಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ರವರ ಕಛೇರಿ ಮಂಡ್ಯ ಜಿಲ್ಲೆ, ಸಾರ್ವಜನಿಕ ಸೂಚನೆಯ ಒಂದನ್ನು ಹೊರಡಿಸಿದೆ. ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡುವ ಹಿನ್ನೆಲೆಯಲ್ಲಿ ವಾಟ್ಸಾಪ್ , ಫೇಸ್ ಬುಕ್, ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್ ಗಳನ್ನು, ಕಮೆಂಟ್ ಪೋಸ್ಟ್ ಗಳನ್ನು ಹಾಕುವಂತಿಲ್ಲ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಇಂದಿನಿಂದ ಹೊಸ ನಿಯಮಗಳು ಅನ್ವಯವಾಗಲಿದ್ದು ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾ ವಹಿಸಲಾಗುವುದು.

ತಪ್ಪು ಸಂದೇಶಗಳನ್ನು ಯಾರಿಗೂ ಕಳುಹಿಸಬೇಡಿ. ನಿಮ್ಮ ಮಕ್ಕಳು, ಸಹೋದರ ,ಸಹೋದರಿಯರು, ಅಕ್ಕಪಕ್ಕದವರು, ಸಂಬಂಧಿಗಳು ಎಲ್ಲರಿಗೂ ಈ ಮಾಹಿತಿಯನ್ನು ತಿಳಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ಪೋಸ್ಟ್ ಹಾಗೂ ವಿಡಿಯೋ ಪೋಸ್ಟ್ ಗಳನ್ನು ಕಳುಹಿಸಬೇಡಿ. ಯಾವುದೇ ರಾಜಕೀಯ ಮತ್ತು ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು ಅಪರಾಧ ವಾಗಿದ್ದು, ಇಂತಹ ಸಂದೇಶಗಳನ್ನು ಕಳುಹಿಸಿದರೆ ವಾರೆಂಟ್ ಇಲ್ಲದೆ ಬಂಧನಕ್ಕೆ ಒಳಗಾಗ ಬೇಕಾಗುವುದು.

ಅಯೋಧ್ಯೆ ವಿಷಯವು ದೇಶದ ಅತೀ ಗಂಭೀರ ವಿಷಯವಾಗಿದ್ದು, ಇಂದಿನಿಂದ ಸಾಮಾಜಿಕ ಜಾಲತಾಣಗಳ ಎಲ್ಲಾ ಸದಸ್ಯರುಗಳು ಆಳವಾಗಿ ಯೋಚಿಸಿ, ತಪ್ಪು ಸಂದೇಶಗಳನ್ನು ಕಳುಹಿಸಬೇಡಿ. ತಪ್ಪದೆ ಸಾರ್ವಜನಿಕರು ಈ ವಿಷಯಗಳನ್ನು ಗಮನಿಸಿ ನಿಯಮಗಳ ಹಾಗೂ ಗುಂಪುಗಳ ಬಗ್ಗೆ ಸದಾ ಜಾಗರೂಕರಾಗಿರಿ. ಮಾದರಿ ಸಮಾಜ ನಿರ್ಮಾಣಕ್ಕೆ ಪೋಲಿಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here