ವಿಶ್ವದ ಗಮನ ಸೆಳೆದಿದ್ದ ಐತಿಹಾಸಿಕ ವಿವಾದ ಎಂದೇ ಬಿಂಬಿತವಾಗಿದ್ದ ರಾಮ ಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ವಿವಾದಕ್ಕೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ನಿರ್ಣಯವನ್ನು ನೀಡುವ ಮೂಲಕ, ಅತಿ ಸೂಕ್ಷ್ಮ ಎನಿಸಿದ್ದ ವಿಷಯಕ್ಕೆ ಒಂದು ನಿರ್ದಿಷ್ಟ ಹಾಗೂ ಸ್ಪಷ್ಟವಾದ ರೂಪವನ್ನು ತನ್ನ ತೀರ್ಮಾನದ ಮೂಲಕ ನೀಡಿ, ರಾಮ ಮಂದಿರ ಸ್ಥಾಪನೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಣಯದ ಹಿನ್ನೆಲೆಯಲ್ಲಿ ಬಹು ಭಾಷಾ ನಟ ಪ್ರಕಾಶ್ ರೈ ಅವರು ಅಯೋಧ್ಯೆಯಲ್ಲಿ ಮಂದಿರ ಹಾಗೂ ಮಸೀದಿ ಎರಡು ನಿರ್ಮಾಣವಾಗುತ್ತಿದೆ ಎಂದು ತಮ್ಮ ಟ್ವೀಟರ್​ನಲ್ಲಿ ಬರೆದುಕೊಂಡಿದ್ದಾರೆ.

ಅವರು ತಮ್ಮ ಟ್ವಿಟರ್ ಪೋಸ್ಟಿನಲ್ಲಿ ಈಗಾಗಲೇ ಈ ಜಾಗದ ಸುತ್ತಲೂ ಸಾಕಷ್ಟು ಪ್ರಾಣ ಹಾನಿಯಾಗಿದೆ. ಮಾನವ ಜೀವನವು ಅಮೂಲ್ಯವಾದದ್ದು, ನಾವು ಮತ್ತಷ್ಟು ಹಿಂಸೆ ಹಾಗೂ ಪ್ರಚೋದನೆಗೆ ಒಳಗಾಗಿ ಗಲಾಟೆ ಮಾಡುವುದನ್ನು ನಿಲ್ಲಿಸೋಣ ಎಂದು ಅವರು ಹೇಳಿದ್ದಾರೆ ಈ ಮೂಲಕ ಅವರು ಕೂಡಾ ಸುಪ್ರೀಂ ಕೋರ್ಟ್ ನ ನಿರ್ಣಯವನ್ನು ಎತ್ತಿ ಹಿಡಿದಿದ್ದಾರೆ.
ಅಲ್ಲದೇ ಈ ಜೀವನ ಅಮೂಲ್ಯವಾದದ್ದು, ಮಾನವ ಜೀವನದತ್ತ ನಾವೆಲ್ಲಾ ಗಮನ ಹರಿಸೋಣ, ದಯವಿಟ್ಟು ಯಾವುದೇ ಅನ್ಯಾಯ ಮಾಡಬೇಡಿ ಎಂಬ ಮನವಿಯನ್ನು ಕೂಡಾ ಅವರು ಮಾಡಿದ್ದಾರೆ.

ಸದಾ ಕಾಲ ಸರ್ಕಾರವನ್ನು ಟೀಕಿಸುವ, ನಿರ್ಣಯಗಳ ಬಗ್ಗೆ ಅಸಮಾಧಾನವನ್ನು ಹೊರ ಹಾಕುವ ಪ್ರಕಾಶ್ ರೈ ಅವರು ಈ ಬಾರಿ ಸುಪ್ರೀಂ ಕೋರ್ಟ್ ನಿರ್ಣಯವನ್ನು ಸ್ವಾಗತಿಸಿರುವುದು ವಿಶೇಷ ಎನಿಸಿದೆ. ತಮ್ಮ ಟ್ವೀಟ್ ಮೂಲಕ ಅವರು ತಮಗೆ ಈ ನಿರ್ಣಯದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುವುದರ ಜೊತೆಗೆ ಮಂದಿರ, ಮಸೀದಿ ಎರಡದ ನಿರ್ಮಾಣದ ತೀರ್ಪಿನ ಬಗ್ಗೆ ಒಲವು ತೋರಿಸಿದ್ದಾರೆ. ‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here