ಅಯೋಧ್ಯೆ ಭೂ ವಿವಾದಕ್ಕೆ ಕೊನೆಗೂ ಒಂದು ಮಹತ್ವದ ತೀರ್ಪು ಸಿಕ್ಕಿದೆ‌. ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟಿನಿಂದ ಮಹತ್ವದ ಐತಿಹಾಸಿಕ ತೀರ್ಪು ನೀಡಿದ್ದು, ತೀರ್ಪು ಹೊರಬಿದ್ದ ನಂತರ ನಾಡಿದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಆಗಿರುವ ಮಾನ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ರಾಷ್ಟ್ರದ ಜನರ ಮುಂದೆ ಮನವಿಯೊಂದನ್ನು ಮಾಡಿದ್ದಾರೆ. ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದ್ದು, ಅದನ್ನು ಮಾನ್ಯ ಮಾಡಲೇ ಬೇಕು ಹಾಗೂ ಅದಕ್ಕೆ ಪ್ರತಿಯೊಬ್ಬರೂ ತಲೆಬಾಗಲೇ ಬೇಕು ಎಂದಿದ್ದಾರೆ.

ಅಷ್ಟೇ ಅಲ್ಲದೆ ತೀರ್ಪಿನಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದೆ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಮಸೀದಿ ನಿರ್ಮಾಣ ಮಾಡುವುದಕ್ಕೂ ಕೂಡಾ ಅವಕಾಶ ನೀಡಲಾಗಿದೆ ಎಂದು ಅವರು ಹೇಳುತ್ತಾ, ಹೊರ ಬಂದಿರುವುದು ನ್ಯಾಯಸಮ್ಮತವಾದ ತೀರ್ಪು. ಹಾಗೂ ಇದೇ ಅಂತಿಮ ತೀರ್ಪು ಎಂದಿದ್ದಾರೆ. ಇದಕ್ಕಿಂದ ಮುಂದೆ ಮತ್ತೊಂದು ತೀರ್ಪು ಇಲ್ಲ ಎಂದಿದ್ದಾರೆ ಹೆಗ್ಡೆಯವರು. ಅವರು ಮಾತನಾಡುತ್ತ ಕೆಲವು ಅರ್ಥಪೂರ್ಣವಾದ ನುಡಿಗಳನ್ನು ಜನರಿಗೆ ತಿಳಿಸಿದ್ದಾರೆ. ನಾವು ತಿನ್ನುವ ಅನ್ನ ಯಾರು ಬೆಳೆದಿದ್ದಾನೆಯೋ ಎಂಬುದು ನಮಗೆ ಗೊತ್ತಿಲ್ಲ.

ಅದೇ ರೀತಿ ನಾವು ಸೇವಿಸುವ ತರಕಾರಿಯನ್ನು ಹಿಂದೂ ಬೆಳೆದಿದ್ದಾನಾ? ಮುಸಲ್ಮಾನ ಅಥವಾ ಕ್ರೈಸ್ತ ಬೆಳೆದಿದ್ದಾನೆಯೋ? ಅದು ಕೂಡಾ ಗೊತ್ತಿಲ್ಲ. ಅದೇ ರೀತಿ ಹಾಲು-ನೀರು ಬೆರೆತಂತೆ ನಮ್ಮ ಇಂದಿನ ಸಮಾಜ ಇರಬೇಕು. ಕೋರ್ಟಿನ ತೀರ್ಪಿನಿಂದ ಯಾರೂಬ್ಬರೂ ಚಂಚಲವಾಗಬಾರದು. ಎಲ್ಲರೂ ಸಹಾ ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕು. ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳೋಣ ಎಂದು ಹೆಗ್ಗಡೆಯವರು ಜನತೆಯಲ್ಲಿ ಮನವಿಯನ್ನು ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here