ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ಶೀಘ್ರಗತಿಯಲ್ಲಿ ಕಾರ್ಯಗಳು ಚುರುಕುಗೊಳ್ಳುತ್ತಿವೆ. ಮಂದಿರ ‌ನಿರ್ಮಾಣ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಮಂದಿರ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳಲು ಟ್ರಸ್ಟ್ ಕೂಡಾ ರಚನೆಯಾಗಿದೆ, ಅಲ್ಲದೆ ಟ್ರಸ್ಟ್ ಅಧ್ಯಕ್ಷರನ್ನು ಕೂಡಾ ನೇಮಕ ಮಾಡಲಾಗಿದ್ದು, ಈಗಾಗಲೇ ಒಂದು ಸಭೆ ಕೂಡಾ ನಡೆದಿದೆ. ಈ ಎಲ್ಲಾ ಬೆಳವಣಿಗೆಗಳ ನಂತರ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನಡೆಸುವ ಕಾರ್ಯಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಟ್ರಸ್ಟ್ ರಚನೆಯ ನಂತರ ಮೊದಲ ಬಾರಿಗೆ ಟ್ರಸ್ಟ್ ನ ಮುಖಂಡರು ಪ್ರಧಾ‌ನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಟ್ರಸ್ಟ್ ನ ಮುಖ್ಯಸ್ಥರು ಒಂದು ಗಂಟೆಯ ಕಾಲ ಮೋದಿಯವರೊಡನೆ ಚರ್ಚೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಅವರು ಮಂದಿರ ನಿರ್ಮಾಣದ ವಿಷಯದ ಕುರಿತಾಗಿ ಪ್ರಧಾನಿಯವರಿಗೆ ಮಾಹಿತಿಯನ್ನು ವಿವರಿಸಿದ್ದಾರೆ. ಮಾಹಿತಿ ವಿವರಿಸಿದ ನಂತರ ಅವರು ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾ‌ನಿ ನರೇಂದ್ರ ಮೋದಿಯವರನ್ನು ಆಹ್ವಾ‌ನಿಸಿದ್ದಾರೆ. ಇನ್ನು ಪ್ರಧಾನಿಯವರು ನೀಡುವ ಸಮಯಕ್ಕೆ ಅನುಗುಣವಾಗಿ ಭೂಮಿ ಪೂಜೆಯ ದಿನಾಂಕವನ್ನು ನಿರ್ಧಾರ ಮಾಡುವತ್ತ ಆಲಯ ನಿರ್ಮಾಣ ಟ್ರಸ್ಟ್ ಆಲೋಚನೆ ಮಾಡುತ್ತಿದೆ ಎನ್ನಲಾಗಿದೆ.

ಟ್ರಸ್ಟ್ ನ ಅrಧ್ಯಕ್ಷರಾದಂತಹ ‌ನಿತ್ಯ ಗೋಪಾಲದಾಸ್ ಅವರು ಮಾತನಾಡುತ್ತಾ, ಟ್ರಸ್ಟ್ ನ ಮುಖಂಡರು ಪ್ರಧಾನಿ ಯನ್ನು ಭೇಟಿ ಮಾಡಿ, ಅವರಿಗೆ ಭೂಮಿ ಪೂಜೆಗೆ ಆಹ್ವಾನವನ್ನು ನೀಡಿರುವುದಾಗಿ, ಪ್ರಧಾನಿಯವರು ಕೂಡಾ ತಾನು ಬರುವುದಾಗಿ ಹೇಳಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ ಭೂಮಿ ಪೂಜೆ ದಿನಾಂಕವನ್ನು ಇನ್ನೂ ನಿರ್ಧಾರ ಮಾಡಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಟ್ರಸ್ಟ್ ಈ ವಿಷಯವಾಗಿ ನಿರ್ಧಾರವನ್ನು ತೆಗೆದುಕೊಂಡು, ಭೂಮಿ ಪೂಜೆಯ ದಿನಾಂಕವನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here