ಕನ್ನಡ ಚಿತ್ರರಂಗದ ​ ರಾಕಿಂಗ್​ ದಂಪತಿ ಯಶ್​-ರಾಧಿಕಾರ ಮುದ್ದಿನ ಮಗಳು ಆಯ್ರಾ ಯಶ್  ಮೊದಲ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ  ಅದ್ದೂರಿಯಾಗಿ ಆಚರಿಸಲಾಯಿತು. ಇದಕ್ಕಾಗಿ ಫನ್​ವರ್ಲ್ಡ್​ನಲ್ಲಿ ಡಿಸ್ನಿ ವರ್ಲ್ಡ್​​ ಮಾದರಿ ಅದ್ಬುತ ಕಲ್ಪನೆಯಲ್ಲಿ ಸೆಟ್​ ಹಾಕಲಾಗಿತ್ತು.ಕರೂಸೆಲ್​ ರೈಟ್​ ಥೀಮ್​ನಲ್ಲಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಕೇಕ್​ ಅನ್ನು ಸಿದ್ಧಪಡಿಸಲಾಗಿತ್ತು. 8 ಅಂತಸ್ತುಗಳ ಕೇಕ್​ ಅನ್ನು ಆಯ್ರಾ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು.

ಈ ಸಂಭ್ರಮದ ಮತ್ತೊಂದು ಹೈ ಲೈಟ್​ ಎಂದರೆ ಇಡೀಸ್ಯಾಂಡಲ್​ವುಡ್​ ಮಂದಿ ಅಲ್ಲಿ ಹಾಜರಾಗಿದ್ದರು.ಶಿವಣ್ಣ, ಪುನೀತ್​, ದರ್ಶನ್​, ಸುಮಲತಾ, ಶ್ರೀಮುರುಳಿ ಸೇರಿದಂತೆ ಹಲವು ನಟನಟಿಯರು ಆಯ್ರಾಗೆ ಶುಭಕೋರಿದ್ದರು. ಇನ್ನು ಈ ಹುಟ್ಟುಹಬ್ಬದ ಸಣ್ಣ ಪುಟ್ಟ ವಿಡಿಯೋಗಳು ಕೂಡ ಹರಿದಾಡಿದ್ದವು.ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿರುವ ಯಶ್​ ರಾಧಿಕಾಗೆ, ಮಗಳು ಹುಟ್ಟುಹಬ್ಬದ ವಿಡಿಯೋ ಹಂಚಿಕೊಳ್ಳುವಂತೆ ಅಭಿಮಾನಿಗಳು ಕೋರಿಕೆ ಇಟ್ಟಿದ್ದರು.

ಈ ಕೋರಿಕೆ ಆಧಾರದ ಮೇಲೆ ಯಶ್​ ಮೊದಲ ಬಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಯ್ರಾ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡಿದ್ದಾರೆ.3.25 ನಿಮಿಷದ ಈ ವಿಡಿಯೋದಲ್ಲಿ ಹುಟ್ಟುಹಬ್ಬ ಹೇಗೆ ನಡೆಯಿತು. ಯಾರೆಲ್ಲಾ ಬಂದಿದ್ದರು. ಸೆಟ್​ ಹೇಗಿತ್ತು ಎಂಬ ಕುರಿತು ಸಂಪೂರ್ಣ ಚಿತ್ರಣ ಕಂಡು ಬರುತ್ತದೆ. ಅದ್ಭುತ ಸಂಗೀತದ ಈ ವಿಡಿಯೋ ಇಲ್ಲಿದೆ ನೋಡಿ.

https://m.facebook.com/story.php?story_fbid=2776465989247461&id=1579757015585037

https://m.facebook.com/story.php?story_fbid=2776465989247461&id=1579757015585037

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here