ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕು ಎನ್ನುವ ವಿಷಯವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದು, ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಸುಪ್ರೀಂ ಕೋರ್ಟ್ ಶಬರಿಮಲೈಗೆ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶದ ವಿಚಾರವಾಗಿ ಸಲ್ಲಿಸಲಾಗಿರುವ ಮರುಪರುಶೀಲನಾ ಅರ್ಜಿಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ನಿರಾಕರಣೆ ತೋರಿದೆ. ಅಲ್ಲದೆ ವಿಷಯವನ್ನು ಸವಿಸ್ತಾರವಾಗಿ ನೋಡುವ ದೃಷ್ಟಿಕೋನದಿಂದ ನೋಡುವ ಉದ್ದೇಶದಿಂದ, ದೇಶದಲ್ಲಿ ದೇವಾಲಯಗಳು ಮಾತ್ರವಲ್ಲದೇ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರ ಪ್ರವೇಶದ ಅಸಮಾನತೆ ತೋರುವ ಎಲ್ಲಾ ವಿವಾದಗಳನ್ನು ತೀರ್ಮಾನ ಕೈಗೊಳ್ಳುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಾಡಿದೆ.

ದಾವೋದಿ ಬೊಹ್ರಾ ಮುಸ್ಲಿಂ ರಲ್ಲಿ ಇರುವ ಸಂಪ್ರದಾಯಗಳು, ಮಸೀದಿಗಳಲ್ಲಿ ಮಹಿಳೆಯರ ಪ್ರವೇಶ ನಿಷೇಧ, ಪಾರ್ಸಿಯಲ್ಲದವರನ್ನು ಮದುವೆಯಾದ ಪಾರ್ಸಿ ಮಹಿಳೆಯರಿಗೆ ಪಾರ್ಸಿ ಮಂದಿರಗಳಲ್ಲಿ ಪ್ರವೇಶ ನಿಷೇಧ ಈ ಕುರಿತು ವಿವಾದಗಳನ್ನು ಒಟ್ಟಿಗೇ ಕೈ ಗೆತ್ತಿಕೊಂಡು ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ನಿರ್ಧಾರವೊಂದನ್ನು ಮಾಡಿದೆ. ಈ ಎಲ್ಲಾ ವಿವಾದಗಳ ಜೊತೆಗೆ ಶಬರಿಮಲೈಗೆ ಮಹಿಳೆಯರ ಪ್ರವೇಶ ವಿವಾದವನ್ನು ಕೂಡಾ ಪರಿಗಣಿಸಲಾಗುವುದು ಎಂದು ನ್ಯಾಯಪೀಠವು ತಿಳಿಸಿದೆ.

ಕಳೆದ ನವೆಂಬರ್ 14 ರಂದು ಪಂಚ ಸದಸ್ಯ ಪೀಠ ಶಬರಿಮಲೈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಣಯವನ್ನು ಘೋಷಣೆ ಮಾಡುತ್ತದೆ ಎಂದೇ ನಿರೀಕ್ಷೆಗಳು ಇದ್ದವು. ಆದರೆ ಪಂಚ ಸದಸ್ಯ ಪೀಠವು ಈ ವಿಚಾರವನ್ನು ವಿಸ್ತೃತ ಪೀಠ ವಿಚಾರಣೆಯನ್ನು ನಡೆಸಬೇಕು ಎಂದು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುತ್ತು. ಅಲ್ಲದೆ ಅದೇ ಸಂದರ್ಭದಲ್ಲಿ ದಾವೂದಿ ಬೊಹ್ರಾ ಸಮುದಾಯ, ಮುಸ್ಲಿಂ ಮಸೀದಿಗಳಲ್ಲಿ ಮಹಿಳೆಯರ ಪ್ರವೇಶ ಹಾಗೂ ಪಾರ್ಸಿ ಮಂದಿರಗಳಲ್ಲಿ ಮಾಡುವ ಮಹಿಳಾ ತಾರತಮ್ಯದ ಬಗ್ಗೆ ಕೂಡಾ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here