ಸಚಿವ ಸಂಪುಟ ರಚನೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನ ಮತದ ಸ್ಫೋಟ ದೊಡ್ಡ ಮಟ್ಟದಲ್ಲಿ ಆಗಿದೆ. ನಿನ್ನೆಯಷ್ಟೇ ರಾಜಿನಾಮೆ ಸುಳಿವು ನೀಡಿದ್ದ ಎಂ.ಬಿ ಪಾಟೀಲ್ ಭಿನ್ನಮತದ ಬೆನ್ನಲ್ಲೇ ಇಂದು ಕಾಂಗ್ರೆಸ್ ನ ಮತ್ತೊಬ್ಬ ರೆಬೆಲ್ ಶಾಸಕ ತಮ್ಮ ಪಕ್ಷದ ವಿರುದ್ದ ಬಹಿರಂಗವಾಗಿ ಸಿಡಿದೆದ್ದಿದ್ದಾರೆ. ಬಿ.ಸಿ.ಪಾಟೀಲ್ರಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಿಷ್ಠಾವಂತ ಶಾಸಕನಾದ ನನಗೆ ನಮ್ಮ ಪಕ್ಷ ದವರೇ ಅಧಿಕಾರ ಸಿಗದಂತೆ ಸಂಚು ಮಾಡಿದ್ದಾರೆ, ನನ್ನ ನಿಷ್ಟೆ ನನ್ನನ್ನು ಆರಿಸಿದ ಜನಗಳಿಗೇ ಹೊರತು ಯಾವುದೇ ಹೈಕಮಾಂಡಿಗಲ್ಲ ಹೀಗೆ ಹೇಳುವ ಮೂಲಕ ತಮ್ಮ ಆಕ್ರೋಶ ಮತ್ತೊಮ್ಮೆ ಹೊರಹಾಕಿದ್ದಾರೆ.


ಪಕ್ಷದ ಅಭ್ಯರ್ಥಿಯಾಗಿ ನಾನು ನಿಜಕ್ಕೂ ಕಡೆಗಣಿಸಲ್ಪಟ್ಟಿರುವುದು ಬೇಸರ ತಂದಿದೆ ಅಲ್ಲಿ ದುಡ್ಡಿರುವವರಿಗೆ ಆಧ್ಯತೆ ಮಣೆ ಹಾಕಿ ದೊಡ್ಡಮಟ್ಟದ ಲಾಭಿ ನಡೆಸಿದ್ದಾರೆ, ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವ ಅವಶ್ಯಕತೆ ನನಗಿಲ್ಲ.
ಇಂಥಹ ಒಂದು‌ ಮೋಸ ಮಾಡುವ ಉದ್ದೇಶಕ್ಕಾಗಿ ನಮ್ಮನ್ಮ ರೆಸಾರ್ಟ್ ನಲ್ಲಿ ಬಂದಿಸಿ ಸಿಕ್ಕ ಸಿಕ್ಕ ಕಡೆ ಕೂಡಿ ಹಾಕಿ ಮಾನಸಿಕ ಹಿಂಸೆಗೊಳಪಡಿಸಿ ಈಗ ತಮ್ಮ ಬೇಳೆ ಬೇಯಿಸಿ ಕೊಂಡಿದ್ದಾರೆ ಹೀಗೆಂದು ಎಂದು ತಮ್ಮ ಆಕ್ರೋಶ ಹೊರಗೆಡವಿದ್ದಾರೆ,
ಬಿ.ಸಿ.ಪಾಟೀಲ್ ರವರ ಬೆಂಬಲಿಗರು ಒಟ್ಟಾಗಿ ತಮ್ಮ ನಾಯಕನಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದಾರೆ, ಉತ್ತರ ಕರ್ನಾಟಕದ ಪ್ರಭಾವಿ ನಾಯಕನಿಗೆ ಅನ್ಯಾಯವಾಗಿದೆ ಯೆಂದು ಹೋರಾಟ ಮಾಡುತ್ತಿರುವಾಗಲೇ ಒಬ್ಬ ಕಾರ್ಯಕರ್ತ ವಿಷ ಕುಡಿಯಲು ಮುಂದಾದ ಅಷ್ಟರಲ್ಲೇ ಅಲ್ಲಿಯೇ ಇದ್ದ ಗುಂಪು ತಡೆದು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಇಷ್ಟೆಲ್ಲ ಹೋರಾಟ ,ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕಾಂಗ್ರೆಸ್ ನಾಯಕರೂ ಸಹ ಬಿ.ಸಿ.ಪಾಟೀಲ್ ರನ್ನ ಭೇಟಿ ಯಾಗಿಲ್ಲ ,ಅಲ್ಲದೇ ರಾಹುಲ್ ಗಾಂಧಿ ಅಸಮಧಾನಿತರಿಗೆ ಯಾವುದೇ ಸಭೆ ಸೇರುವಂತಿಲ್ಲ ಒಂದು ಪಕ್ಷ ಇದನ್ನು ಉದಾಸೀನ ಮಾಡಿದರೆ ಇರುವ ನಿಗಮ ಮಂಡಳಿಗಳಲ್ಲಿಯೂ ಸ್ಥಾನಮಾನಗಳನ್ನು ನೀಡುವುದಿಲ್ಲ ಎಂದು ಎಚ್ಚರಿಕೆ ರವಾನೆ ಮಾಡಿದ್ದಾರೆ, ಇದಕ್ಕೆ ಪ್ರತ್ಯುತ್ತರವಾಗಿ ಇವೆಲ್ಲಾ ಮೂಗಿಗೆ ಬಿಸಿ ತುಪ್ಪ ಸವರುವ ಕೆಲಸವೆಂದು ತಿರುಗೇಟು ನೀಡಿದ ಕೌರವ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here