ಆರೋಗ್ಯ ಸಚಿವ ಶ್ರೀರಾಮುಲು ಮಗಳ ಮದುವೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಚ್ 04 ಹಾಗೂ 05 ರಂದು ನಡೆಯಲಿರುವ ಪುತ್ರಿ ರಕ್ಷಿತಾ ಅವರ ಮದುವೆಗೆ ಬಿಜೆಪಿ ಪಕ್ಷದ ನಾಯಕ ಹಾಗೂ ಕೇಂದ್ರದ ಸಚಿವರಾದ ಅಮಿತ್ ಶಾ ಅವರನ್ನು ಅಹ್ವಾನಿಸಿದರು. ಅವರ ಕಚೇರಿಯಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡಿದ ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ತಮ್ಮ ಪುತ್ರಿ ರಕ್ಷಿತಾ ಅವರ ಮದುವೆಗೆ ಬರುವಂತೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದೇ ವೇಳೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ ಶ್ರೀರಾಮುಲು ಅವರು ಡಿಸಿಎಂ ಹುದ್ದೆ ವಿಚಾರವಾಗಿ ಸಹ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರೋಗ್ಯ ಸಚಿವರಾದ ಶ್ರೀ ರಾಮುಲು ಪುತ್ರಿ ರಕ್ಷಿತಾ ಅವರ ವಿವಾಹವು ಹೈದರಾಬಾದ್‌ ನ ಉದ್ಯಮಿ ರವಿಕುಮಾರ್ ಅವರ ಪುತ್ರ ಲಲಿತ್ ಕುಮಾರ್ ಅವರೊಂದಿಗೆ ಮಾರ್ಚ್ ತಿಂಗಳ 5 ರ ಗುರುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಸಚಿವ ಶ್ರೀರಾಮುಲು ಅವರು ರಾಜ್ಯದ ಪ್ರಮುಖ ಗಣ್ಯರಿಗೆ ಮಗಳ ಮದುವೆಯ ಅಹ್ವಾನ ಪತ್ರಿಕೆ ನೀಡುತ್ತಿದ್ದಾರೆ .

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here