ಕೆಲವು ದಿನಗಳ ಹಿಂದೆಯಷ್ಟೇ ಮೊಬೈಲ್ ಫೋನ್ ನ ರೇಡಿಯೇಷನ್ ತಪ್ಪಿಸಲು ತುಳಿಸಿ ದಳಗಳನ್ನು ಬಳಸಿ ಎಂದು ಹೇಳಿದ್ದ, ಯೋಗ ಗುರು ಬಾಬಾ ರಾಮ್ ದೇವ್ ಅವರು ಇದೀಗ ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸುವುದಿಲ್ಲ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿ, ಮತ್ತೆ ಚರ್ಚೆಗೆ ಕಾರಣವಾಗಿದ್ದಾರೆ. ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಸಂತ ಸಮ್ಮೇಳನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಈ ಸಭೆಯಲ್ಲಿ ಅಷ್ಟ ಮಠದ ಎಲ್ಲಾ ಸ್ವಾಮೀಜಿಗಳ ಜೊತೆಗೆ ದಕ್ಷಿಣ ಕನ್ನಡ, ಕಾಸರಗೋಡು ಉಡುಪಿಯ 18 ಸಂತರು ಕೂಡಾ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಮಾತನಾಡುತ್ತಾ ಬಾಬಾ ದೇವ್ ಅವರು ಇಂತಹುದೊಂದು ಹೇಳಿಕೆಯನ್ನು ನೀಡಿದ್ದಾರೆ.

ಬಾಬಾ ರಾಮ್ ದೇವ್ ಅವರು ಮಾತನಾಡುತ್ತಾ ಗೋವು ಭಕ್ಷಕರೇ, ನಿಮಗೆ ಮಾಂಸ ತಿನ್ನಲೇ ಬೇಕು ಎಂದಾದರೆ ತಿನ್ನಿ. ಆದರೆ ಗೋವನ್ನು ಮಾತ್ರ ತಿನ್ನುವುದು ಬೇಡ ಎಂದು ಹೇಳಿ, ಕೋಳಿ, ಮೀನು, ಕುದುರೆ, ಕತ್ತೆ, ನಾಯಿ, ಯಾವುದನ್ನಾದರೂ ತಿನ್ನಿ ಎಂದಿದ್ದಾರೆ. ಆದರೆ ಗೋವು ಮಾತ್ರ ಬೇಡ. ಏಕೆಂದರೆ ಗೋವು ತಾಯಿಗೆ ಸಮಾನ. ಅದನ್ನು ತಿನ್ನುವಿರಿ ಎಂದರೆ ನಿಮ್ಮ ವಯಸ್ಸಾದ ತಂದೆಯನ್ನು ತಿನ್ನಲು ಹೇಸುವುದಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಮುಸಲ್ಮಾನರಿಗೆ ಮೊಘಲರ ಕಾಲದ ಕ್ರೂರವಾದ ಆಡಳಿತ ಎಂದಿಗೂ ಮಾದರಿಯಾಗಬಾರದು.

ಭಾರತೀಯ ಮುಸಲ್ಮಾನರು ನಮ್ಮವರೇ ಆಗಿದ್ದು ಅವರೆಲ್ಲಾ ಗೋಹತ್ಯಾ ನಿಷೇಧವನ್ನು ಬೆಂಬಲಿಸಬೇಕೆಂದು ಬಾಬಾ ಕರೆ ನೀಡಿದ್ದಾರೆ. ಅಕ್ಬರ್, ಬಾಬರ್, ಹುಮಾಯೂನ್, ಔರಂಗಜೇಬನ ಕಾಲದಲ್ಲಿ ಭಾರತದಲ್ಲಿ ಗೋ ಹತ್ಯಾ ನಿಷೇಧ ಇತ್ತು. ಆದರೆ ಅದು ಈಗ ಏಕಿಲ್ಲ? ಎಂದೂ ಈಗ ನಿಷೇಧಕ್ಕೆ ವಿರೋಧ ಏಕೆ ಎಂದು ಕೂಡಾ ಅವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಗೋವನ್ನು ನಮ್ಮ ತಾಯಿ ಎಂದರೆ, ಕೋಣ ತಂದೆ ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ ಜಾಗತಿಕ ತಾಪಮಾನ ಏರಿಕೆಗೆ ಮಾಂಸಾಹಾರವೇ ಕಾರಣ ಎಂದು ಬಾಬಾ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here