ಕೊರೊನಾ ಸೋಂಕಿನಿಂದ ದೇಶದ ಜನರು ಮತ್ತು ಸರ್ಕಾರಗಳು ಬೆಂಬೆತ್ತಿ ಹೋಗಿವೆ. ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ನಿವಾರಣೆ‌‌ ಮಾಡಲು ಸಾಧ್ಯವೆಂದು ಕಳೆದ ಮಂಗಳವಾರವಷ್ಟೇ ಬಾಬಾ ರಾಮ್‌ದೇವ್ ಅವರು ಕೊರೊನಿಲ್ ಎಂಬ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಮಾತ್ರವಲ್ಲದೇ, ಅದನ್ನು ಬಡವರಿಗೆ ಉಚಿತವಾಗಿ ಔಷಧವನ್ನು ನೀಡವುದಾಗಿ ಕೂಡಾ ಅವರು ಹೇಳಿದ್ದರು. ಆದರೆ ಈ ಔಷಧಿಯನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಬಾಬಾ ರಾಮ್ ದೇವ್ ಮತ್ತು ಇನ್ನೂ ನಾಲ್ಕು ಜನರ ವಿರುದ್ಧ ರಾಜಸ್ಥಾನದ ಜೈಪುರದಲ್ಲಿ FIR ದಾಖಲಾಗಿದೆ.

ಪತಂಜಲಿ ಆಯುರ್ವೇದ ಔಷಧಗಳ ಕಂಪನಿ ಮಂಗಳವಾರದಂದು ಕೊರೊನಿಲ್ ಔಷಧವನ್ನು ಬಿಡುಗಡೆ ಮಾಡಿ ಇದು ಕೊರೊನಾ ಸೋಂಕಿಗೆ ಔಷಧ ಎಂದು ತಿಳಿಸಿತ್ತು. ಈ ಔಷಧ ಬಿಡುಗಡೆ ದೊಡ್ಡ‌ ಸುದ್ದಿಯಾಗುತ್ತಲೇ ಅನೇಕ ಚರ್ಚೆಗಳು ಕೂಡಾ ಆರಂಭವಾದವು. ಆ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯವು ಕೊರೊನಿಲ್ ಔಷಧ ಹಾಗೂ ಅದರ ಪ್ರಯೋಗಾತ್ಮಕ ಪರೀಕ್ಷೆಯ ವಿವರವನ್ನು ಸಲ್ಲಿಸುವಂತೆ ಹಾಗೂ ಅದೇ ಸಂದರ್ಭದಲ್ಲಿ ಇದು ಕೊರೊನಾಗೆ ಮದ್ದು ಎನ್ನುವಂತೆ ಜಾಹೀರಾತು ನೀಡಬಾರದೆಂದು ತಡೆಯನ್ನು ಹೇರಿತ್ತು.

ಜೈಪುರ ದಲ್ಲಿ ಜ್ಯೋತಿ ನಗರ ಪೋಲಿಸ್ ಠಾಣೆಯಲ್ಲಿ
ಐಪಿಸಿ ಸೆಕ್ಷನ್ 420 ಹಾಗೂ ಇನ್ನೂ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕೊರೊನಿಲ್ ಕೊರೊನಾ ಸೋಂಕನ್ನು ಗುಣಪಡಿಸುತ್ತದೆ ಎನ್ನುವ ಮೂಲಕ ಬಾಬಾ ರಾಮ್ ದೇವ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಬಾಬಾ ರಾಮ್​ದೇವ್​, ಪಥಂಜಲಿ ಸಿಇಓ ಆಚಾರ್ಯ ಬಾಲಕೃಷ್ಣ, ವಿಜ್ಞಾನಿ ಅನುರಾಗ್ ವರ್ಷನೇ, NIMS ಅಧ್ಯಕ್ಷ ಡಾ. ಬಲ್ಬೀರ್ ಸಿಂಗ್ ತೋಮರ್ ಹಾಗೂ ನಿರ್ದೇಶಕ ಡಾ. ಅನುರಾಗ್ ತೋಮರ್​ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here