ರಾಕಿಂಗ್​ ಸ್ಟಾರ್​ ದಂಪತಿ ಇಂದು ಬಹಳ ಸಂಭ್ರಮದ ದಿನ. ಇಂದು ಅವರು ಬಹಳಷ್ಟು ಸಂತಸ ಹಾಗೂ ಖುಷಿಯಲ್ಲಿರುವ ದಿನ‌. ಅವರ ಈ ಸಂತೋಷ ಹಾಗೂ ಸಂಭ್ರಮಕ್ಕೆ ಕಾರಣ ಕೂಡಾ ಇದೆ‌. ಅದೇನೆಂದರೆ ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳು, ಅವರ ಲಕ್ಕಿ ಚಾರ್ಮ್ ಹಾಗೂ ಈಗಾಗಲೇ ಸ್ಟಾರ್ ಕಿಡ್ ಆಗಿ ಜನರ ಮನಸ್ಸನ್ನು ಸೂರೆಗೊಂಡಿರುವ, ಐರಾ ಯಶ್ ಹುಟ್ಟು ಹಬ್ಬ. ಅದಕ್ಕೆ ಐರಾಳ ತಂದೆ ತಾಯಿ ಇಬ್ಬರಿಗೂ ಇಂದು ಸಂಭ್ರಮ ದಿನ. ಯಶ್ ಅವರ ಲಕ್ಕಿ ಚಾರ್ಮ್ ಆಗಿರುವ ಅವರ ಮಗಳಿಗೆ ಇಂದು ಒಂದನೇ ವರ್ಷದ ಹುಟ್ಟು ಹಬ್ಬ‌.

ಆಗಾಗ ತನ್ನ ವಿಡಿಯೋ ಹಾಗೂ ಫೋಟೊಗಳ ಮೂಲಕ ಜನರ ಮೆಚ್ಚುಗೆ ಪಡೆದಿರುವ ಕ್ಯೂಟ್ ಬೇಬಿ ಐರಾಳ ಜನ್ಮದಿನವನ್ನು ಅವರ ಯಶ್ ದಂಪತಿ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಐರಾಳಿಗೆ ಹುಟ್ಟು ಹಬ್ಬದ ಸಂಭ್ರಮ, ಆಕೆಯ ತಂದೆ ತಾಯಿಗೆ ಡಬಲ್ ಸಂತೋಷ. ಮಗಳ ಹುಟ್ಟು ಹಬ್ಬಕ್ಕೆ ರಾಧಿಕಾ ಪಂಡಿತ್ ಅವರು ನಿನ್ನೆಯೇ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದರು. ಮಗಳ ಜೊತೆ ತನ್ನ ಒಂದು ಸುಂದರವಾದ ಮತ್ತು ಭಾವನಾತ್ಮಕ ಎನಿಸುವ ಫೋಟೋ ಒಂದನ್ನು ಅವರು ಹಂಚಿಕೊಂಡಿದ್ದಾರೆ.

ರಾಧಿಕಾ ಅವರು ಮಗಳ ಜೊತೆ ಇರುವ ಫೋಟೋವನ್ನು ಹಂಚಿಕೊಂಡು, ನನ್ನ ಹೃದಯದ ಶಾಂತಿ, ನನ್ನ ಆತ್ಮದ ಭಾಗವಾಗಿರೋ ಮುದ್ದಿನ ದೇವತೆಗೆ ಜನ್ಮ ದಿನದ ಶುಭಾಶಯಗಳು ಎಂದು ಶುಭಾಶಯವನ್ನು ಕೂಡಾ ಫೋಟೋ ಜೊತೆ ಪೋಸ್ಟ್ ಮಾಡುವ ಮೂಲಕ, ತಮ್ಮ ಮುದ್ದಿನ ಮಗಳ ಹುಟ್ಟುಹಬ್ಬದ ಸಂತಸವನ್ನು ತಮ್ಮೆಲ್ಲಾ ಅಭಿಮಾನಿಗಳೊಂದಿಗೆ ಹಂಚಿ ಕೊಂಡಿದ್ದಾರೆ.

https://m.facebook.com/story.php?story_fbid=3088569597826242&id=141163155900249

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here