ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯು ವಲಯ ದಾಟಿ ಬುಧವಾರ ಒಳನುಸುಳಿದ್ದ ಪಾಕಿಸ್ತಾನ ಯುದ್ಧ ವಿಮಾನಗಳನ್ನು ದೇಶದ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿತ್ತು. ಅದರ ಫೈಲಟ್‌ ಅಭಿನಂದನ್‌ ಪಾಕ್‌ ಗಡಿಯಲ್ಲಿ ಇಳಿದಿದ್ದರು. ಬಳಿಕ ಅವರನ್ನು ಪಾಕ್‌ ಸೇನೆ ವಶಕ್ಕೆ ಪಡೆದಿತ್ತು. ನಂತರ ಎರಡು ದಿನಗಳ ಬಳಿಕ ಭಾರತದ ಒತ್ತಡಕ್ಕೆ ಎದರಿದ್ದ ಪಾಕಿಸ್ತಾನ ಭಾರತೀಯ ವಾಯುಸೇನೆಯ ವಿಂಗ್ ಕಮ್ಯಾಂಡರ್ ಅಭಿನಂದನ್ ಅವರನ್ನು ಗೌರವಯುತವಾಗಿ ಬಿಡುಗಡೆ ಮಾಡಿತ್ತು.

ಏರ್ ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕಿಸ್ತಾನಿ ಸೈನಿಕರ ವಶದಲ್ಲಿ ಸಿಕ್ಕು ಹಿಂಸೆ ಅನುಭವಿಸಿ ಈಗ ಬಿಡುಗಡೆಯಾಗಿರುವ ಭಾರತದ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ . ದೇಶಾದ್ಯಂತ ಮೆಚ್ಚುಗೆಯ ಮಹಪೂರವೇ ಹರಿದು ಬರ್ತಿದೆ . ಅಲ್ಲದೇ ವಿಭಿನ್ನ ರೀತಿಯಲ್ಲಿ ಅಭಿನಂದನ್​ ಶೌರ್ಯವನ್ನು ಜನರು ಸ್ಮರಿಸುತ್ತಿದ್ದಾರೆ. ರಾಜಸ್ಥಾನದ ಜೈಪುರದ ದಂಪತಿ ಮಾತ್ರ ಕೊಂಚ ಡಿಫರೆಂಟ್​.

ಅಭಿನಂದನ್ ಭಾರತಕ್ಕೆ ಮರಳಿದ ಹಿನ್ನೆಲೆ ತಮ್ಮ ಮಗುವಿಗೆ ಅಭಿನಂದನ್​ ಹೆಸರಿಡಲು ನಿರ್ಧರಿಸಿದ್ದಾರೆ.ನೆಹಲ್​ಪುರದ ದೌಸಾ ಗ್ರಾಮದ ವಿಮಲೇಶ್​ ಭಂಡಾರಿ ಪತ್ನಿ ಹಾಗೂ ರವಿ ಟೆಕ್ಕಿವಾಲ್ ಎಂಬುವರ​​ ಪತ್ನಿ ನೀಲಮ್​​ ಗಂಡು ಮಗುವಿಗೆ ಜನ್ಮ ನೀಡಿದ್ದು. ಹೆರಿಗೆಯ ವೇಳೆ ಪಾಕ್​​ ವಶದಲ್ಲಿರುವ ಅಭಿನಂದನ್​​ ಸುರಕ್ಷಿತವಾಗಿ ವಾಪಸ್​ ಬರೋ ವಿಷ್ಯ ತಿಳಿದ ಕೂಡಲೇ ಇಬ್ಬರೂ​ ತಮ್ಮ ಮಗುವಿಗೆ ಅಭಿನಂದನ್​ ಹೆಸರು ನಾಮಕರಣ ಮಾಡಲು ನಿರ್ಧರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here